9:01 AM Wednesday27 - January 2021
ಬ್ರೇಕಿಂಗ್ ನ್ಯೂಸ್
ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ…

ಇತ್ತೀಚಿನ ಸುದ್ದಿ

ಹವಳದಂತೆ ಹೊಳೆಯುತ್ತಿರುವ ಅಂಗಾರಕನ ಅಂದ ಕಂಡಿದ್ದೀರಾ .?.. ಭೂಮಿಗೆ ಹತ್ತಿರ ಬರ್ತಿದೆ ಆ ಗ್ರಹ.!

September 29, 2020, 1:27 PM

info.reporterkarnataka@gmail.com

ಈ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳದಂತೆ ಕೆಂಬಣ್ಣದಲ್ಲಿ ಹೊಳೆಯುತ್ತಿರುವ ಮಂಗಳ ಗ್ರಹ ಗೋಚರಿಸುತ್ತಿದೆ.

ಅಕ್ಟೊಬರ್ 13ರಂದು ಮಂಗಳ ಗ್ರಹ ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಗ್ರಹ ಹತ್ತಿರಬರುವ ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ.

ಹೀಗೆ ಹತ್ತಿರ ಬಂದಾಗ ದೊಡ್ಡದಾಗಿ ಕಂಡು ಇಡೀ ರಾತ್ರಿ ಹವಳದಂತೆ ಕಾಣಿಸಲಿದೆ.

ಸುಮಾರು 24 ಕೋಟಿ ಕೀಮೀ ದೂರದಲ್ಲಿ ದೀರ್ಘ ವ್ರತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿಯೂ ಸುಮಾರು 15 ಕೋಟಿ ಕೀಮೀ ದೂರದಲ್ಲಿ ಸೂರ್ಯನ ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಲ್ಲಿ , ಸಮಿಪಿಸಿ ದೂರಸರಿಯುತ್ತವೆ. ನಾಡಿದ್ದು ಅಕ್ಟೋಬರ್ 13ರಂದು ಭೂಮಿಗೆ 6.2 ಕೋಟಿ ದೂರದಲ್ಲಿ, ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕೀಮೀ ದೂರದಲ್ಲಿರುತ್ತಾ, ಚಿಕ್ಕದಾಗಿ ಗೋಚರಿಸುತ್ತದೆ.

ಈಗ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮೀರಿಸುವ ಕೆಂಬಣ್ಣದ ಹವಳ, ಮಂಗಳ ಕಾಣುತ್ತಿದೆ. ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ನಾಡಿದ್ದು ಅಕ್ಟೋಬರ್ ಒಂದನೇ ತಾರೀಕು ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಇವುಗಳ ಜೊತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ ಬರೀ ಕಣ್ಣಿನಿಂದಲೇ ಗುರುತಿಸಬಹುದು.
ನೋಡಿ ಆನಂದಿಸಿ.

ಡಾ. ಎ.ಪಿ. ಭಟ್, ಉಡುಪಿ.

ಇತ್ತೀಚಿನ ಸುದ್ದಿ

ಜಾಹೀರಾತು