5:21 PM Friday4 - December 2020
ಬ್ರೇಕಿಂಗ್ ನ್ಯೂಸ್
ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ

ಇತ್ತೀಚಿನ ಸುದ್ದಿ

ಹೀಗೊಂದು ವಿಚಿತ್ರ ಪ್ರಸಂಗ: ಪತಿಯ ಅತಿಯಾದ ಪ್ರೀತಿ ತಾಳಲಾಗದೆ ವಿಚ್ಛೇದನಕ್ಕೆ ಪತ್ನಿಯಿಂದ ಕೋರ್ಟ್ ಗೆ ಮೊರೆ !!

August 23, 2020, 4:06 AM

ನವದೆಹಲಿ(reporterkarnataka news): ಪತಿಯ ಅನೈತಿಕ ಸಂಬಂಧ, ವಿಪರೀತ ಮದ್ಯವ್ಯಸನ, ದೌರ್ಜನ್ಯ, ಕಿರುಕುಳ ಮುಂತಾದ ಕಾರಣಗಳಿಗೆ ಪತ್ನಿಯಂದಿರು ವಿಚ್ಛೇದನ ಕೋರಿ ಕೋರ್ಟ್ ಕಟೆಕಟೆ ಏರಿದ ಕತೆಯನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಗಂಡ ವಿಪರೀತ ಪ್ರೀತಿ ಮಾಡುತ್ತಾನೆ, ಜಗಳವೇ ಮಾಡುವುದಿಲ್ಲ. ಲೈಫ್ ತುಂಬಾ ಬೋರ್ ಆಗಿದೆ ಎಂಬ ಕಾರಣ ನೀಡಿ ಡೈಪೋರ್ಸ್ ಗೆ ಅರ್ಜಿ ಹಾಕಿದ ವಿಚಿತ್ರ ಪ್ರಸಂಗ ನಡೆದಿದೆ.

ಗಂಡ ಅಡುಗೆ ಮಾಡುತ್ತಾನೆ, ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾನೆ. ತುಂಬಾ ಪ್ರೀತಿಸುತ್ತಾನೆ, ಸಿಟ್ಟಾಗಲ್ಲ, ಬೈಯಲ್ಲ. ಇದರಿಂದ ಲೈಫ್ ನಲ್ಲಿ ಯಾವುದೇ ಥ್ರೀಲ್ ಇಲ್ಲ. ಲೈಫ್‌ ಬೋರ್‌ ಆಗಿ ಹೋಗಿದೆ ಎಂದು  ಯುವತಿ ವಿಚ್ಛೇದನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾಳೆ!. ವಿಶೇಷವೆಂದರೆ ಆಕೆಗೆ ಮದುವೆಯಾಗಿ ಇನ್ನೂ ಎರಡು ವರ್ಷ ಪೂರ್ಣಗೊಂಡಿಲ್ಲ.

ಇದೆಲ್ಲ ನಡೆದದ್ದು ಉತ್ತರ ಪ್ರದೇಶದ ಶಂಭಾಲ್ ಜಿಲ್ಲೆಯಲ್ಲಿ. ಈಕೆ ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ಸಲ್ಲಿಸಿದ್ದಾಳೆ. ಅರ್ಜಿಯನ್ನು ಗಮನಿಸಿದ ನ್ಯಾಯಾಧೀಶರು ಅಚ್ಚರಿಗೊಂಡದ್ದು ಮಾತ್ರವಲ್ಲದೇ ತಮ್ಮ ಲೈಫ್‌ನಲ್ಲಿಯೇ ಇಂಥದ್ದೊಂದು ಅರ್ಜಿ ನೋಡಿಲ್ಲ ಎಂದು ಹೇಳಿದ್ದಾರೆ. ಈ ಕಾರಣಗಳನ್ನು ಹೊರತುಪಡಿಸಿ ವಿಚ್ಛೇದನ ಪಡೆಯಲು ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ಪ್ರಶ್ನಿಸಿದ್ದು, ಬೇರೆ ಯಾವುದೇ ಕಾರಣವಿಲ್ಲ ಎಂದು ಆಕೆ ತಿಳಿಸಿದ್ದಾಳೆ.

ಆದರೆ ನ್ಯಾಯಾಧೀಶರು ಆಕೆಯ ವಾದವನ್ನು ಒಪ್ಪಿಕೊಳ್ಳಲಿಲ್ಲ. ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಪರಸ್ಪರ ಇಬ್ಬರೂ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಅರ್ಜಿ ವಜಾಗೊಂಡಿದ್ದರಿಂದ ಬೇಸರಗೊಂಡಿರುವ ಯುವತಿ, ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚಿಸಿದ್ದಾಳೆ. ಆದರೆ ಊರಿನ ಮುಖಂಡರು ಸಹ ಅಸಮರ್ಥತೆಯನ್ನು ಹೊರ ಹಾಕಿದ್ದಾರೆ. 

ನಾನು ಯಾವಾಗಲೂ, ಯಾವುದೇ ತಪ್ಪು ಮಾಡಿದರೂ, ಏನೂ ಅನ್ನುವುದಿಲ್ಲ, ಕ್ಷಮಿಸಿಬಿಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಿದರೆ ಸುಮ್ಮನಿರುತ್ತಾನೆ. ಎಲ್ಲದಕ್ಕೂ ಪತಿ ಒಪ್ಪಿಗೆ ಸೂಚಿಸುವ, ಸಹಿಸಿಕೊಳ್ಳುವ ಪತಿಯೊಂದಿಗೆ ಸಂಸಾರ ನಡೆಸುವ ಅಗತ್ಯ ನನಗಿಲ್ಲ ಎಂದು ಈಕೆ ಹೇಳಿದ್ದಾಳೆ. ಪತಿಯ ಪ್ರೀತಿಯನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ. ವಿವಾಹವಾಗಿ 18 ತಿಂಗಳು ಕಳೆದರೂ, ಈ ವರೆಗೆ ಪತಿಯೊಂದಿಗೆ ಒಂದು ಬಾರಿಯೂ ಜಗಳವಾಡಿಲ್ಲ ಎಂದು ವರದಿಯಲ್ಲಿ ಯುವತಿ ಉಲ್ಲೇಖಿಸಿದ್ದಾಳೆ. ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇದನ್ನೇ ಮುಂದಿಟ್ಟು, ಇದೀಗ ಉನ್ನತ ಕೋರ್ಟ್‌ಗೆ ಹೋಗಲು ಯುವತಿ ತಯಾರಿ ನಡೆಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು