9:10 PM Friday26 - February 2021
ಬ್ರೇಕಿಂಗ್ ನ್ಯೂಸ್
ಪಂಚ ರಾಜ್ಯಗಳ ಎಲೆಕ್ಷನ್ ಘೋಷಣೆ: ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಚುನಾವಣೆ; ಮೇ… ಮಂಗಳೂರಿನಲ್ಲಿ ಫೆ. 28ರಂದು ಕರಾವಳಿ ಜಾನಪದ ಜಾತ್ರೆ: ಸಚಿವ ಲಿಂಬಾವಳಿ ಉದ್ಘಾಟನೆ ಪಂಚ ರಾಜ್ಯಗಳ ಚುನಾವಣೆ: ಇಂದು ಸಂಜೆ 4.30ಕ್ಕೆ ಘೋಷಣೆ: ಎಲ್ಲೆಲ್ಲಿ ಎಲೆಕ್ಷನ್ ನಡೆಯಲಿ?… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲೆಬಸ್ ವಿದ್ಯಾರ್ಥಿಗಳಿಗೆ 3 ತಿಂಗಳ ಕ್ರ್ಯಾಶ್ ಕೋರ್ಸ್: ಶ್ಲಾಘ್ಯದಲ್ಲಿ ಅಡ್ಮಿಷನ್ ಆರಂಭ ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು…

ಇತ್ತೀಚಿನ ಸುದ್ದಿ

ಹೆಸರು ಬದಲಾಯಿಸಿ ಹಿಂದೂ ಹುಡುಗಿಯರಿಗೆ ವಂಚನೆ: ಅಸ್ಸಾಂ ಸಚಿವ ಆರೋಪ

October 14, 2020, 2:07 PM

ಗುವಾಹಟಿ(reporterkarnataka news): ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮ್ಮನ್ನು ಹಿಂದೂ ಧರ್ಮಕ್ಕೆ ಸೇರಿದವರೆಂದು ಯುವತಿಯರಿಗೆ ನಂಬಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಅಸ್ಸಾಂ ಸಚಿವ  ಹಿಮಂತ್ ಬಿಸ್ವಾ ಸರ್ಮಾ ಆರೋಪಿಸಿದ್ದಾರೆ. ಮಂದಿರ ಸೇರಿದಂತೆ ಹಲವೆಡೆ ಇರುವ ಚಿತ್ರಗಳನ್ನು  ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡುತ್ತಾರೆ. ತಮ್ಮ ನಿಜವಾದ ಧರ್ಮವನ್ನು ಮರೆ ಮಾಚಿ  ಕೆಲವರು ಈ ಕೃತ್ಯ ಎಸಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ಇತ್ತೀಚೆಗೆ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಬಳಿಕ ಯುವತಿಗೆ ಪತಿ ತನ್ನ ಧರ್ಮಕ್ಕೆ ಸೇರಿದವನಲ್ಲ ಎಂಬುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಇದು ವಂಚನೆ ಮಾತ್ರವಲ್ಲ ವಿಶ್ವಾಸ  ದ್ರೋಹ ಕೂಡ ಆಗಿದೆ ಎಂದು  ಸಚಿವ  ಸರ್ಮಾ ಕಿಡಿ ಕಾರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು