8:30 PM Wednesday3 - March 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಸೀಸನ್ -8ರ ಆರಂಭದಲ್ಲೇ ಪ್ರೇಮ್ ಕಹಾನಿ ಶುರು: ಇಲ್ಲಿ ಯಾರಿಗೆ… ಕಾಸರಗೋಡು – ಮಂಗಳೂರು ಬಸ್ ಸಮಸ್ಯೆ: ಎಬಿವಿಪಿಯಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ ಮಾನಸಿಕ ಕಿರುಕುಳ ದೂರು ನೀಡಿದ ಪಾಲಿಕೆಯ ಮಹಿಳಾ ಸಿಬ್ಬಂದಿ ನೌಕರಿ ಬಿಟ್ಟು ಹೋಗುವಂತೆ ಮಾಡಲು… ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ರಾಜೀನಾಮೆ ಕೇಳಿಲ್ಲ, ನಾನು ಕೊಡುವುದೂ ಇಲ್ಲ: ಸಚಿವ ರಮೇಶ್… ಪ್ರತಿಯೊಬ್ಬ ಮಗುವೂ ಸುಶಿಕ್ಷಿತನಾಗುವುದೇ ಟ್ರಸ್ಟ್ ಉದ್ದೇಶ: ಡಾ. ಅಬ್ದುಲ್ ಶಕೀಲ್ ನಾನೇನು ತಪ್ಪು ಮಾಡಿಲ್ಲ, ತಪ್ಪು ಸಾಬೀತಾದರೆ ಗಲ್ಲಿಗೇರಿಸಿ: ಸಚಿವ ರಮೇಶ್ ಜಾರಕಿಹೊಳಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅದು ನಕಲಿ ಸಿಡಿ; ನಾನು ತಪ್ಪೇ ಮಾಡಿಲ್ಲ, ಮತ್ಯಾಕೆ ರಾಜೀನಾಮೆ ನೀಡಲಿ :… ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ: ಪ್ರತಿಕ್ರಿಯೆಗೆ ಸಿಎಂ ನಿರಾಕರಣೆ; ನಾಳೆ ತುರ್ತು ಸಂಪುಟ… ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಸುಮಂಗಲಾ ರಾವ್ ಅವರಿಗೆ ಬಿಜೆಪಿ…

ಇತ್ತೀಚಿನ ಸುದ್ದಿ

ಹೆಣ್ಮಕ್ಕಳಿಗೆ ಸುವರ್ಣಾವಕಾಶ: ಕಡಿಮೆ ಫೀಸಿನಲ್ಲಿ ಡಿಪ್ಲೊಮಾ 

September 10, 2020, 3:11 PM

ಮಂಗಳೂರು (reporterkarnataka news):

ನಗರದ ಬೋಂದಲ್ ನಲ್ಲಿರುವ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ  ಪ್ರಥಮ ಸೆಮಿಸ್ಟೆರ್ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,  ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು  ಸೆಪ್ಟೆಂಬರ್ 16 ರಂದು ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಡಿಪ್ಲೊಮಾಗೆ ಆಯ್ಕೆಯಾದ ಅಭ್ಯರ್ಥಿಗಳು ವರ್ಷಕ್ಕೆ ರೂ. 1430 ಮಾತ್ರ ಫೀಸು ಪಾವತಿಸಬೇಕಾಗಿದ್ದು, ಇಷ್ಟೊಂದು ಕಡಿಮೆ ದರದಲ್ಲಿ ಡಿಪ್ಲೊಮಾ ಕಲಿಯಲು ಹೆಣ್ಣುಮಕ್ಕಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಲಭ್ಯವಿರುವ ಕೋರ್ಸ್‍ಗಳ ವಿವರ ಇಂತಿವೆ;- ಮಹಿಳಾ ಪಾಲಿಟೆಕ್ನಿಕ್‍ನಲ್ಲಿ 1)ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್,     2)ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, 3)ಕಮರ್ಷಿಯಲ್ ಪ್ರಾಕ್ಟೀಸಸ್( ಕನ್ನಡ, ಇಂಗ್ಲೀಷ್) ಹಾಗೂ 4) ಲೈಬ್ರರಿ ಅಂಡ್ ಇನ್‍ಫಾರ್‍ಮೇಷನ್ ಸೈನ್ಸ್ ಈ ನಾಲ್ಕು ಕೋರ್ಸುಗಳ ಕಲಿಕೆಗೆ ಅವಕಾಶವಿದೆ.

ಆನ್-ಲೈನ್ ನಾನ್ ಇಂಟರಾಕ್ಟಿವ್ ಕೌನ್ಸಿಲ್ (ಆನ್‍ಲೈನ್ ಆಪ್ಷನ್ ಎಂಟ್ರಿ) ನಡೆಸುವ ಮೂಲಕ ರಾಜ್ಯದ ಯಾವುದೇ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಪಡೆಯಬಹುದಾದ ವ್ಯವಸ್ಥೆಯನ್ನು ಸರ್ಕಾರವು ಅಳವಡಿಸಿದೆ. 

ಹೆಚ್ಚಿನ ಮಾಹಿತಿಗಾಗಿ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು, ದೂರವಾಣಿ ಸಂಖ್ಯೆ 0824 2482334, 9480744667 ಸಂಪರ್ಕಿಸುವಂತೆ ಸಂಸ್ಥೆಯ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು