ಇತ್ತೀಚಿನ ಸುದ್ದಿ
ಹತ್ರಾಸ್ ಅತ್ಯಾಚಾರ ಪ್ರಕರಣ: ಸಿಬಿಐಯಿಂದ ಸಹೋದರರ ವಿಚಾರಣೆ
October 14, 2020, 11:31 AM

ಲಕ್ನೋ(reporterkarnataka news): ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಯುವತಿಯ ಹತ್ಯೆಗೆ ಸಂಬಂಧಿಸಿದ ಸಿಬಿಐ ತನಿಖೆ ಬಿರುಸು ಪಡೆದುಕೊಂಡಿದೆ.
ಇಂದು ಮೃತಪಟ್ಟ ಯುವತಿಯ ಮೂವರು ಸಹೋದರರನ್ನು ಸಿಬಿಐ ವಿಚಾರಣೆಗೆ ಗುರಿಪಡಿಸಲಿದೆ. ಅವರಿಂದ ಹೇಳಿಕೆ ದಾಖಲಿಸಲಿದೆ.
ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆ ನಡೆಸುವಂತೆ ಶಿಫಾರಸು ಮಾಡಿತ್ತು. ಇದೇ ವೇಳೆ ಹತ್ರಾಸ್ ಪ್ರತಿಭಟನೆಗೆ ವಿದೇಶಿ ನೆರವು ಹರಿದು ಬಂದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ.