5:08 PM Thursday22 - October 2020
ಬ್ರೇಕಿಂಗ್ ನ್ಯೂಸ್
ನಳಿನ್ ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಪೋಕರಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಮಂಗಳೂರು ವೆಂಕಟರಮಣ ದೇಗುಲದ ಶಾರದೆಗೆ ಮಹಾಲಕ್ಷ್ಮಿ ಅಲಂಕಾರ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ ಹುಲಿಯ ಹಲ್ಲು ವಶ: ನಾಲ್ವರು ಆರೋಪಿಗಳ ಬಂಧನ ಆಕ್ಸ್ ಫರ್ಡ್ ಲಸಿಕೆ  ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೋತ್ಸವ ಇಂದು ಶಿರಾದಲ್ಲಿ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಟಿಆರ್ ಪಿ ಹಗರಣ: ಇಂದು ರಿಪಬ್ಲಿಕನ್ ಪ್ರಿಯಾ ಮುಖರ್ಜಿ ವಿಚಾರಣೆ ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ  ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ…

ಇತ್ತೀಚಿನ ಸುದ್ದಿ

ಹಣ ಕೊಡದೆ ಹೆಣ ಕೊಡದ ಖಾಸಗಿ ಆಸ್ಪತ್ರೆಗಳು: ಡಿವೈಎಫ್ ಐ ನಿರಂತರ ಪ್ರತಿಭಟನೆ

September 19, 2020, 4:15 PM

ಮಂಗಳೂರು(reporterkarnataka news)

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸದೆ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸದ ಸರಕಾರಗಳು ಕೊರೊನಾ ಸಂಕಷ್ಟದ ಸಮಯದಲ್ಲಿ ಬೆತ್ತಲಾಗಿದೆ. ಖಾಸಗಿ ಆಸ್ಪತ್ರೆಗಳು ಬಡವರ ಪಾಲಿಗೆ ಮರಣ ಶಾಸನವಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಡಿವೈಎಫ್‌ಐ ಕಾವೂರು ವಲಯ ಸಮಿತಿ ವತಿಯಿಂದ ನಗರದ ಕಾವೂರಿನಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿಗಿಂತ ಹೆಚ್ಚಿನ ದರ ಲೂಟಿ ಮಾಡುತ್ತಿದ್ದಾರೆ. ದರಪಟ್ಟಿ ಡಿವೈಎಫ್ಐ ಪ್ರಾರಂಭದಿಂದಲೂ ವಿರೋಧಿಸುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳಿಂದ ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಿ ಎಂಬ ಹೋರಾಟ ನಡೆಸುತ್ತಾ ಬಂದಿದ್ದರೂ ರಾಜಕಾರಣಿಗಳ ಖಾಸಗಿ ಪರ ನೀತಿಗಳಿಂದಾಗಿ ಖಾಸಗಿ ಆಸ್ಪತ್ರೆಗಳ ಏಕಸ್ವಾಮ್ಯ ನಡೆಯುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ  3 ಲಕ್ಷದಿಂದ 30 ಲಕ್ಷದವರೆಗೆ ಆಸ್ಪತ್ರೆ ಬಿಲ್‌ಗಳು‌ ಹರಿದಾಡುತ್ತಿವೆ. ಇಷ್ಟು ಮೊತ್ತ ಪಾವತಿಸಿದರೂ ಜೀವ ಉಳಿಸಲಾಗದ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಹೆಣ ಕೊಡದೆ ಇರುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದೆ ಎಂದರು.

ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಏಳು ಖಾಸಗಿ ಮೆಡಿಕಲ್ ಕಾಲೇಜುಗಳಿವೆ ಆದರೆ ವೆನ್‌ಲಾಕ್ ಆಸ್ಪತ್ರೆಗೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಯಾಕೆ ಸಾದ್ಯವಿಲ್ಲ ಎಂದು ಅವರು ಪ್ರಶ್ನಿಸಿದರು. 

ಜಿಲ್ಲೆಯ ಜನಪ್ರತಿನಿಧಿಗಳು ಆಧಾರ್ ತೋರಿಸಿದರೆ ಉಚಿತ ಚಿಕಿತ್ಸೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರ ಈ ಮಾತಿಗೆ ಬೆಲೆ ಇಲ್ಲದಂತಾಗಿದೆ. ಆದರೂ ಖಾಸಗಿ ಆಸ್ಪತ್ರೆಗಳ‌ ಲೂಟಿಯ ವಿರುದ್ದ ಮಾತನಾಡದೆ ಜಿಲ್ಲೆಯ ಜನಪ್ರತಿನಿಧಿಗಳು , ಬಿಜೆಪಿ ಖಾಸಗಿ ಲಾಬಿಗೆ ಮಣಿದಿದೆ ಎಂದು ಆರೋಪಿಸಿದರು. 

ಪ್ರತಿಭಟನೆಯನ್ನು ಉದ್ದೇಶಿಸಿ ಪಂಜಿಮೊಗರು ವಾರ್ಡ್ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಜನಸಾಮಾನ್ಯರ ಬದುಕು‌ ದುಸ್ಥರವಾಗುತ್ತಿದೆ. ಬಿಜೆಪಿ ಸರಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಜಾತಿ ಧರ್ಮದ ವಿಚಾರದಲ್ಲಿ ಬೀದಿಗೆ ಇಳಿಯುವವರು ಕನಿಷ್ಟ ಹತ್ತು ನಿಮಿಷ ಖಾಸಗಿ ಆಸ್ಪತ್ರೆಗಳ ವಿರುದ್ದ ಮಾತನಾಡುತ್ತಿಲ್ಲ.  ಜನಸಾಮಾನ್ಯರ ಗೋಳು ಕೇಳುವವರಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯ ನೇತೃತ್ವವನ್ನು ಡಿವೈಎಫ್ಐ ಮುಖಂಡರಾದ ಶ್ರೀನಾಥ್, ಪ್ರವೀಣ್, ಸುನಂದ , ಸೌಮ್ಯ, ಆಶಾ, ಪ್ರಮೀಳಾ, ಬಶೀರ್, ನೌಶಾದ್, ಖಲೀಲ್, ಚರಣ್, ನವೀನ್ ಕೊಂಚಾಡಿ ವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು