ಇತ್ತೀಚಿನ ಸುದ್ದಿ
ಹಳ್ಳಿ ಪಾಲಿಟಿಕ್ಸ್ ನಲ್ಲಿಯೂ ಕುದುರೆ ವ್ಯಾಪಾರ:ಪಂಚಾಯಿತಿ ಸದಸ್ಯರಿಗೆ 1 ಲಕ್ಷ ರೂ. ಆಮಿಷೆ ! !
January 5, 2021, 4:52 PM

ಬೀದರ್(reporterkarnataka news): ಈ ದೇಶದ ಪಾಲಿಟಿಕ್ಸ್ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಲೋಕಸಭೆ, ವಿಧಾನಸಭೆಗೆ ಮೀಸಲಾಗಿದ್ದ ಕುದುರೆ ವ್ಯಾಪಾರ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಬಂದಿದೆ. ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಕ್ಕಾಗಿ ದೊಡ್ಡ ಮಟ್ಟದ ಡೀಲ್ ನಡೆಯುತ್ತದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮ ಪಂಚಾಯಿತಿನಲ್ಲಿ ಇಂತಹದೊಂದು ಕುದುರೆ ವ್ಯಾಪಾರ ಬೆಳಕಿಗೆ ಬಂದಿದೆ.
ಮಂಗಲಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕುದುರೆ ವ್ಯಾಪಾರ ದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಜಿದ್ದಾಜಿದ್ದಿಯೇ ಏರ್ಪಟ್ಟಿದೆ.
ಮಂಗಲಗಿ ಗ್ರಾಮ ಪಂಚಾಯಿತಿನಲ್ಲಿ ಒಟ್ಟು 21 ಸ್ಥಾನಗಳಿವೆ. ಇಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗೆಲ್ಲಬೇಕಾದರೆ 12 ಸದಸ್ಯರ ಬೆಂಬಲ ಬೇಕು. ಬೆಂಬಲಕ್ಕಾಗಿ ಆಪರೇಶನ್ ಶುರು ಮಾಡಲಾಗಿದೆ. ಪ್ರತಿಯೊಬ್ಬ ಗ್ರಾಪಂ ಸದಸ್ಯರಿಗೆ 1 ಲಕ್ಷ ರೂ. ಅಮಿಷೆಯೊಡ್ಡಲಾಗಿದೆ. ಈಗಾಗಲೇ 25 ಸಾವಿರ ರೂ.ವನ್ನು ನಗದು ರೂಪದಲ್ಲಿ ಸದಸ್ಯರಿಗೆ ಹಂಚಲಾಗಿದೆ. ಸರಕಾರದಿಂದ ಮೀಸಲಾತಿ ಪಟ್ಟಿ ಇನ್ನು ಬಿಡುಗಡೆಯಾಗಬೇಕಿದೆ. ಆದರೆ ಅಷ್ಟರಲ್ಲೇ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.