ಇತ್ತೀಚಿನ ಸುದ್ದಿ
ಹಕ್ಕಿ ಜ್ವರ ಭೀತಿ: 40 ಸಾವಿರ ಬಾತುಕೋಳಿಗಳ ಮಾರಣ ಹೋಮ, ಇಂದು ಕೇಂದ್ರ ತಂಡ ಆಗಮನ
January 7, 2021, 9:49 AM

ತಿರುವನಂತಪುರಂ(reporterkarnataka news): ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಆಲಪುಳ ಜಿಲ್ಲೆಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದ ತಂಡ ಇಂದು ಭೇಟಿ ನೀಡಲಿದೆ.
ಆಲಪುಳ ಜಿಲ್ಲೆಯಲ್ಲಿ ಈಗಾಗಲೇ 40,000ಕ್ಕೂ ಹೆಚ್ಚು ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಕೇರಳದಲ್ಲಿ ಪದೇ ಪದೇ ಹಕ್ಕಿ ಜ್ವರ ಬರುತ್ತಿರುವುದರ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ.