ಇತ್ತೀಚಿನ ಸುದ್ದಿ
ಹಾಡು ನಿಲ್ಲಿಸಿದ ಸಂಗೀತ ಸಾಮ್ರಾಟ ಎಸ್. ಪಿ. ಬಾಲಸುಬ್ರಹ್ಮಣ್ಯಂ
September 25, 2020, 1:27 PM

ಚೆನ್ನೈ( reporterkarnataka news): ಗಾನಲೋಕದ ದಿಗ್ಗಜ ಖ್ಯಾತ ಗಾಯಕ ಎಸ್ಪಿ ನಿಧನ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ (74) ಇಂದು ಕೊನೆಯುಸಿರೆಳೆದರು. ಆಗಸ್ಟ್ನಲ್ಲಿ ಕೋವಿಡ್ -19 ಪಾಸಿಟಿವ್ ಬಂದ ನಂತರ ಅವರು ಸುಮಾರು ಎರಡು ತಿಂಗಳು ಆಸ್ಪತ್ರೆಯಲ್ಲಿದ್ದರು.
ಕೊರೊನಾ ಗೆದ್ದರೂ ಕೂಡ ಮತ್ತೆ ಅಭಿಮಾನಿಗಳನ್ನು ಭೇಟಿ ಮಾಡದೆ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ಪುತ್ರ ಚರಣ್ ಇದನ್ನು ತಿಳಿಸಿದ್ದಾರೆ.
ಬಾಲ ಸುಬ್ರಹ್ಮಣ್ಯಂ ಅವರಿಗೆ ಅವರೇ ಸಾಟಿ. ಮಕ್ಕಳ ಜತೆ ಮಕ್ಕಳಾಗಿ ಸಂಗೀತ ವಿದ್ವಾಂಸರ ಜತೆ ಅವರ ಸರಿಸಾಟಿಯಾಗಿ ತಮ್ಮ ಪ್ರತಿಭೆಯ ಮೂಲಕ ಎಲ್ಲರ ಮನ ಗೆದ್ದಿದ್ದರು ಅವರು.
ಆಗಸ್ಟ್ 5ರಂದು ಅಸ್ವಸ್ಥರಾಗಿದ್ದ ಅವರನ್ನು ಚೆನ್ನೈನ ಎಂ ಜಿ ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು