ಇತ್ತೀಚಿನ ಸುದ್ದಿ
ಗುರುವಾಯೂರು ದೇವಸ್ಥಾನದ 10 ಕೋಟಿ ಹಣ ಹಿಂತಿರುಗಿಸಲು ಸರಕಾರಕ್ಕೆ ಹೈಕೋರ್ಟ್ ಆದೇಶ
December 19, 2020, 9:58 AM

ಕೊಚ್ಚಿ(reporterkarnataka news): ಗುರುವಾಯೂರು ದೇವಸ್ಥಾನ ಆಡಳಿತ ಮಂಡಳಿಯಿಂದ ಕೇರಳ ಸರ್ಕಾರ ಪಡೆದುಕೊಂಡ 10 ಕೋಟಿ ರೂಪಾಯಿಗಳನ್ನು ತಕ್ಷಣ ದೇವಸ್ಥಾನಕ್ಕೆ ಹಿಂತಿರುಗಿಸಬೇಕು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಭಕ್ತರು ನೀಡಿದ ದೇವಸ್ಥಾನದ ಹಣವನ್ನು ಕೇವಲ ದೇವಸ್ಥಾನದ ಅಭಿವೃದ್ದಿಗೆ ಬಳಸಬೇಕು. ಇತರ ಕಾರ್ಯಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.