1:32 AM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಗುರುಪುರ ವೆಂಕಟರಮಣ ದೇವಸ್ಥಾನ ನೂತನ ಯಜ್ಞ ಶಾಲೆಗೆ ಶಿಲಾನ್ಯಾಸದ ಸಡಗರ

November 18, 2020, 8:15 PM

ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು(reporterkarnatakanews):

ಗುರುಪುರ  ವೆಂಕಟರಮಣ ದೇವಸ್ಥಾನ ನೂತನ ಯಜ್ಞ ಶಾಲೆಯ  ಶಿಲಾನ್ಯಾಸ ಬುಧವಾರ ಭಕ್ತಿ ಸಡಗರದಿಂದ ನಡೆಯಿತು.

ನೂತನ ಯಜ್ಞ ಶಾಲೆ ನಿರ್ಮಾಣಕ್ಕೆ ಕಾಶೀ ಮಠಾಧೀಶರಾದ  ಶ್ರೀಮದ್ ಸಂಯಮಿಂದ್ರ  ತೀರ್ಥ ಸ್ವಾಮೀಜಿಯವರಿಂದ ಪೂಜಿಸಿ , ಅನುಗ್ರಹಿಸಲ್ಪಟ್ಟ ಶಿಲೆಗಳ ಮೂಲಕ ಶಿಲಾನ್ಯಾಸ ನೆರವೇರಿಸಲಾಯಿತು. 

ಸಮಾರಂಭ ಶಾರ್ವರಿ ನಾಮ ಸಂವತ್ಸರ ದ ಕಾರ್ತಿಕ ಶುದ್ಧ ದಿನವಾದ ಬುಧವಾರ ಬೆಳಿಗ್ಗೆ  ಗಣಪತಿ ಭಟ್ 

ಅವರ ನೇತೃತ್ವದಲ್ಲಿ  ಶ್ರೀ ಕ್ಷೇತ್ರದ ತಂತ್ರಿಗಳು , ಅರ್ಚಕರು , ಆಡಳಿತ ಸಮಿತಿ , ಕ್ಷೇತ್ರಾಭಿವೃದ್ಧಿ ಸಮಿತಿ ಮತ್ತು ಊರಿನ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಸಂಪನ್ನ ಗೊಂಡಿತು . 

ನೂತನ ಯಜ್ಞ ಶಾಲೆಯ ಸೇವಾ ಸಮರ್ಪಣೆ ಲಕ್ಷ್ಮಿ ದೇವಿ ಮತ್ತು  ಗುರುಪುರ  ಗುಂಡ ಯಾನೆ ದಾಮೋದರ ಶೆಣೈ ಅವರ ಸ್ಮರಣಾರ್ಥ ಮಂಗಳೂರು ಹಾಗೂ ಬೆಂಗಳೂರು ಗುರುಪುರ ಶೆಣೈ ಸಹೋದರರು ಸಮರ್ಪಿಸಿದರು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಜಿ . ಹರಿರಾಮ್ ಶೆಣೈ , ಲೆಕ್ಕ ಪರಿಶೋಧಕ ಜಿ . ರಾಜಾರಾಮ್ ಶೆಣೈ , ದೇವಳದ ಆಡಳಿತ ಮಂಡಳಿಯ ಜಿ ಪಾಂಡುರಂಗ ಕಾಮತ್ , ಜಿ. ರಾಜೇಶ್ ಪ್ರಭು , ಜಿ. ವಿಷ್ಣು ಕಾಮತ್ , ಜಿ. ಪ್ರಾಣೇಶ್ ಪ್ರಭು,  ಮ್ಯಾನೇಜರ್ ಎಂ. ಪ್ರಸಾದ್ ಪೈ , ಜಿ . ವಿನಾಯಕ್ ಪ್ರಭು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು