ಇತ್ತೀಚಿನ ಸುದ್ದಿ
ಜಿಎಸ್ ಟಿ ಮಂಡಳಿಯ ಸಭೆ ಇಂದು: ರಾಜ್ಯದ ಪಾಲು ಕುರಿತು ಕೋಲಾಹಲ ಸಾಧ್ಯತೆ
October 5, 2020, 8:13 AM

ನವದೆಹಲಿ(reporterkarnataka news): ಜಿಎಸ್ ಟಿ ಮಂಡಳಿಯ 42ನೇ ಸಭೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ರಾಜ್ಯಗಳಿಗೆ ಜಿಎಸ್ ಟಿ ಪಾಲನ್ನು ಕೇಂದ್ರ ನೀಡದಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಯಿದೆ.
ಪ್ರತಿಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಕೇಂದ್ರದ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿಲ್ಲ. ಸಾಲ ಪಡೆದುಕೊಳ್ಳಿ ಎಂಬ ಪ್ರಸ್ತಾಪವನ್ನು ಕೇಂದ್ರ ಮುಂದಿಟ್ಟಿದೆ. 22 ರಾಜ್ಯಗಳು ಇದಕ್ಕೆ ಈಗಾಗಲೇಸಮ್ಮತಿ ಸೂಚಿಸಿವೆ.
ಪಂಜಾಬ್, ಕೇರಳ ಸೇರಿದಂತೆ ಹಲವು ರಾಜ್ಯಗಳು ಇದಕ್ಕೆ ವಿರೋಧ ಸೂಚಿಸಿವೆ