ಇತ್ತೀಚಿನ ಸುದ್ದಿ
ಜಿಎಸ್ ಟಿ ನಷ್ಟ ಪರಿಹಾರಕ್ಕೆ ರಾಜ್ಯ ಸರಕಾರಗಳು ಸಾಲ ಪಡೆಯಬೇಕು: ಕೇಂದ್ರದ ಸೂತ್ರ ತಿರಸ್ಕರಿಸಲು ಖರ್ಗೆ ಆಗ್ರಹ
September 1, 2020, 2:46 AM

ನವದೆಹಲಿ(reporterkarnataka news): ಜಿಎಸ್ ಟಿ ನಷ್ಟ ಭರ್ತಿಮಾಡಲು ರಾಜ್ಯ ಸರ್ಕಾರಗಳು ಸಾಲ ಪಡೆಯಬೇಕು ಎಂಬ ಕೇಂದ್ರದ ಪ್ರಸ್ತಾಪ ತಿರಸ್ಕರಿಸುವಂತೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ರಾಜ್ಯಗಳು ಕಷ್ಟ ಅನುಭವಿಸಬಾರದು. ರಾಜ್ಯಗಳು ಸಾಲ ಮಾಡುವುದರ ಬದಲಾಗಿ ಕೇಂದ್ರ ಸರ್ಕಾರವೇ ಸಾಲ ಪಡೆದು ರಾಜ್ಯಗಳಿಗೆ ನೀಡಲಿ ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಆದಾಯ ಸಂಗ್ರಹ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಜಿಎಸ್ ಟಿ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಬದಲಾಗಿ ಹಲವು ಮಾರ್ಗಗಳನ್ನು ಸೂಚಿಸಿದ್ದು, ಸಾಲ ಪಡೆಯುವುದು ಕೂಡ ಇದರಲ್ಲಿ ಸೇರಿದೆ.