7:04 PM Thursday21 - January 2021
ಬ್ರೇಕಿಂಗ್ ನ್ಯೂಸ್
ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ… ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ…

ಇತ್ತೀಚಿನ ಸುದ್ದಿ

ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆ:  ದ.ಕ.ಜಿಲ್ಲೆಯ 4 ತಾಲೂಕುಗಳಲ್ಲಿ ಶೇ. 78.69 ಮತದಾನ

December 27, 2020, 9:37 PM

ಮಂಗಳೂರು(reporterkarnataka news): ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಜಿಲ್ಲೆಯ 4 ತಾಲೂಕುಗಳಲ್ಲಿ ಶೇ. 78.69

ಮತದಾನವಾಗಿದೆ.

ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕುಗಳಲ್ಲಿ ಭಾನುವಾರ ಎರಡನೇ ಹಂತದ ಚುನಾವಣೆ ನಡೆಯಿತು.

ಮಂಗಳೂರು, ಮೂಡುಬಿದರೆ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಕಳೆದ ಮಂಗಳವಾರ ಮೊದಲ ಹಂತದ ಚುನಾವಣೆ ನಡೆದಿತ್ತು.

ಜಿಲ್ಲೆಯಲ್ಲಿ ಇಂದು  ನಡೆದ ಎರಡನೇ ಹಂತದ

ಚುನಾವಣೆಯಲ್ಲಿ  ಬೆಳ್ತಂಗಡಿ 46, ಪುತ್ತೂರು 22, ಸುಳ್ಯ25 ಮತ್ತು ಕಡಬ 21 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 114 ಗ್ರಾಮ ಪಂಚಾಯಿತಿಗಳ 1541ಕ್ಷೇತ್ರಗಳಲ್ಲಿ 41 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ 1500 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ವರ್ಗವಾರು ಸಂಖ್ಯಾ ವಿವರ:   ಅನುಸೂಚಿತ ಜಾತಿಯಲ್ಲಿ ಒಟ್ಟು 371, ಅನುಸೂಚಿತ ಪಂಗಡದಲ್ಲಿ ಒಟ್ಟು 272ಹಾಗೂ ಹಿಂದುಳಿದ ಅ ವರ್ಗದಲ್ಲಿ 699, ಹಿಂದುಳಿದ ಬಿ ವರ್ಗದಲ್ಲಿ ಒಟ್ಟು138 ಸಾಮಾನ್ಯ 1921ಒಟ್ಟು 3,421 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು