2:26 AM Saturday16 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ… ಕೊರೊನಾ ತಡೆಗೆ ಸ್ವದೇಶಿ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ ಲಿಂಗಸುಗೂರು: ಕೋವಿಡ್ 19 ಲಸಿಕೆ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ತಾಲೂಕು… ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ: ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಎಸ್.… ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಿಂದ ಬಿದ್ದು ಮೀನುಗಾರ ಸಾವು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲಾಧಿಕಾರಿ… ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ  ದೇರಳಕಟ್ಟೆ ರೆಂಜಡಿಯ ಡಾ. ಅಬ್ದುಲ್ ಶಕೀಲ್ ನೇಮಕ ನೂತನ ಸಚಿವ ಎಸ್. ಅಂಗಾರರಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದ ಬಿಜೆಪಿ ಭೀಷ್ಮ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಗ್ರಾಪಂ ಚುನಾವಣೆ: ಡಿ, 20, 25, 27, 29 ಮತ್ತು 30ರಂದು ಮದ್ಯದಂಗಡಿ ಬಂದ್

December 19, 2020, 10:09 AM

ಮಂಗಳೂರು(reporterkarnataka news): ಗ್ರಾಮ ಪಂಚಾಯತ್‍ಗಳ ಸಾರ್ವತ್ರಿಕ ಚುನಾವಣೆ  -2020 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮಂಗಳೂರು, ಮೂಡುಬಿದ್ರೆ ಮತ್ತು ಬಂಟ್ವಾಳ ತಾಲೂಕುಗಳಲ್ಲಿ  ಡಿಸೆಂಬರ್ 20 ರಂದು ಸಂಜೆ 5 ಗಂಟೆಯಿಂದ ಡಿಸೆಂಬರ್ 22 ರಂದು ಮಧ್ಯರಾತ್ರಿ 12 ಗಂಟೆಯವರಗೆ ಹಾಗೂ ಡಿಸೆಂಬರ್ 25 ರಂದು ಸಂಜೆ 5 ಗಂಟೆಯಿಂದ 27 ರಂದು ಮಧ್ಯರಾತ್ರಿ 12 ಗಂಟೆವರೆಗೆ ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮತ್ತು ಮತ ಎಣಿಕೆಯ ಸಲುವಾಗಿ ಡಿಸೆಂಬರ್ 29 ರ ಸಂಜೆ 5 ಗಂಟೆಯಿಂದ ಡಿಸೆಂಬರ್ 30 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮತ ಎಣಿಕೆ ನಡೆಯುವ ಪ್ರದೇಶದ  5 ಕಿ.ಮೀ ವ್ಯಾಪ್ತಿಯನ್ನು ಮದ್ಯ ಮುಕ್ತ ದಿನಗಳೆಂದು ಘೋಷಿಸಿ ಈ ದಿನಗಳಲ್ಲಿ ಎಲ್ಲಾ ವಿಧಧ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧಧ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿರುತ್ತಾರೆ.
ಈ ದಿನಗಳಲ್ಲಿ ಚುನವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಸೂಚಿತ ಅವಧಿಯಲ್ಲಿ ಯಾವುದೇ ಹೊಟೇಲ್‍ಗಳಲ್ಲಾಗಲೀ ನಾನ್ ಪ್ರೊಪ್ರೈಟರ್‍ಗಳಲ್ಲಿ ಸ್ಟಾರ್ ಹೊಟೇಲ್‍ಗಳಲ್ಲಾಗಲೀ ವ್ಯಾಪ್ತಿಗೊಳಪಟ್ಟ ವೈನ್ ಶಾಪ್, ಬಾರ್‍ಗಳಲ್ಲಿ  ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು