ಇತ್ತೀಚಿನ ಸುದ್ದಿ
ಗ್ರಾಮ ಪಂಚಾಯಿತಿ ಎಲೆಕ್ಷನ್ ಕೌಟಿಂಗ್: ಮಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್
December 30, 2020, 7:00 PM

ಮಂಗಳೂರು(reporterkarnataka news): ನಗರದ ಹಲವು ಕಡೆಗಳಲ್ಲಿ ಬುಧವಾರ ಸಂಜೆ ಟ್ರಾಫಿಕ್ ಜಾಮ್ ಉಂಟಾಗಿ ಸುಗಮ ಸಂಚಾರಕ್ಕೆ ತಡೆಯಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಇಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಾಮೂಲಿಗಿಂತ ಬುಧವಾರ ವಾಹನ ಹಾಗೂ ಜನರ ಸಂಖ್ಯೆ ಹೆಚ್ಚಾಗಿತ್ತು. ನಗರದ ಕಂಕನಾಡಿ ಪ್ರದೇಶದಲ್ಲಿ ಇಳಿಹೊತ್ತಿನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಾಯಿತು.