ಇತ್ತೀಚಿನ ಸುದ್ದಿ
ಮಂಗಳೂರು ಗೋಲಿಬಾರ್ ಪ್ರಕರಣ ಅಂತಿಮ ವಿಚಾರಣೆ ಪೂರ್ಣ: ಶೀಘ್ರದಲ್ಲೇ ಸರಕಾರಕ್ಕೆ ವರದಿ
September 2, 2020, 7:33 AM

ಮಂಗಳೂರು(reporterkarnataka news): ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಮ್ಯಾಜಿಸ್ಟ್ರೀರಿಯಲ್ ತನಿಖೆಯ ಅಂತಿಮ ವಿಚಾರಣೆ ಬುಧವಾರ ಎಸಿ ಕೋರ್ಟ್ ನಲ್ಲಿ ನಡೆಯಿತು.
ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿ ಜೆ. ಜಗದೀಶ್ ಅವರು ಇಂದು 45 ಮಂದಿ ಸಾರ್ವಜನಿಕರು, 13 ಪೊಲೀಸರು ಹಾಗೂ 3 ಮಂದಿ ವೈದ್ಯರ ಹೇಳಿಕೆಗಳನ್ನು ದಾಖಲಿಸಿ ವಿಚಾರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 413 ಮಂದಿಯ ವಿಚಾರಣೆ ನಡೆಸಲಾಗಿದೆ. ಮಂಗಳೂರು ಗಲಭೆ ಹಾಗೂ ಗೋಲಿಬಾರ್ ಘಟನೆ ಸಂಬಂಧಿಸಿದ ವೀಡಿಯೊ ತುಣುಕುಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದೆ.
ವಿಚಾರಣೆಯ ಅವಧಿಯನ್ನು ಸರಕಾರ ಒಂದು ತಿಂಗಳು ವಿಸ್ತರಿಸಿದೆ. ಅದರೊಳಗೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿಯಾದ ಜೆ.ಜಗದೀಶ್ ತಿಳಿಸಿದ್ದಾರೆ.
ಮಂಗಳೂರು ಗೋಲಿಬಾರ್ ಗೆ ಇಬ್ಬರು ಮೃತಪಟ್ಟಿದ್ದರು.