ಇತ್ತೀಚಿನ ಸುದ್ದಿ
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್ ಪ್ರಶ್ನೆ
December 3, 2020, 9:54 PM

ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್ ಪ್ರಶ್ನೆ
ಮಂಗಳೂರು(reporterkarnataka news) :
ಎಪಿಎಂಸಿ ಕಾನೂನು ರಾತ್ರಿ ಬೆಳಗಾಗುವುದರೊಳಗೆ ತಂದಿದ್ದೀರಿ. ನಿಮಗೆ ಎಲ್ಲ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ ?, ಜನರಲ್ಲಿ ಯಾಕೆ ಗೊಂದಲ ಮೂಡಿಸುತ್ತೀರಿ? ಇದು ಬಿಜೆಪಿ ಸರಕಾರಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಪ್ರಶ್ನೆ
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೀಗ ಗೋ ಹತ್ಯೆ
ನಿಷೇಧ ಕಾನೂನಿನ ಬಗ್ಗೆ ಭಾರಿ ಚರ್ಚೆ ನಡೆಯುತ್ತಲಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಬಿಜೆಪಿ ಸರಕಾರ ಹೇಳುತ್ತಲ್ಲೇ ಇದ್ದು ಈವರೆಗೂ ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾನೂನು ರಾತ್ರಿ ಬೆಳಗಾಗುವುದರೊಳಗೆ
ಜಾರಿಗೆ ತಂದಿದ್ದೀರಿ. ನಿಮಗೆ ಎಲ್ಲ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ತರಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ಯಾಕೆ ತಡ ಎಂದು ಪ್ರಶ್ನಿಸಿದರು.
ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ. ಹಾಗಿರುವಾಗ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ಎರಡು ತಿಂಗಳಿನಿಂದ ಬರೀ ಚರ್ಚೆ ಯಾಕೆ? ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ, ಚರ್ಚಿಸುವ ಎಂದು ಸವಾಲೆಸೆದಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಸಮೀಪವಾಗುತ್ತಿರುವ ನಿಟ್ಟಿನಲ್ಲಿ ಬಿಜೆಪಿಯು ಬರೀ ಭಾವಾನಾತ್ಮಕ ವಿಚಾರಗಳನ್ನು ತೆಗೆದುಕೊಂಡು ಬಂದು ಜನರನ್ನು ವಿಭಜಿಸಿ ಮತ ಪಡೆಯುವ ತಂತ್ರ ನಡೆಸುತ್ತಿದೆ. ಬದಲಾಗಿ ಅವರು ಈ ಕಾನೂನನ್ನು ಜಾರಿ ಮಾಡುವುದಿಲ್ಲ ಎಂದು ಖಾದರ್ ಹೇಳಿದರು.
ಗೋ ಹತ್ಯೆ ನಿಷೇಧ ತರುತ್ತೇವೆ ಎಂದು ಹಲವು ವರ್ಷಗಳಿಂದ ಹೇಳಿಕೊಂಡೇ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಭಾರತದಿಂದಲ್ಲೇ ವಿದೇಶಗಳಿಗೆ ಹೆಚ್ಚು ಗೋ ಮಾಂಸ ರಫ್ತಾಗುತ್ತಿದೆ. ಆದರೆ ಅವರಿಗೆ ಕಾನೂನು ಜಾರಿಗೆ ತರಲು ಆಗಿದೆಯೇ? ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ಆಡಳಿತದಲ್ಲಿ ತಂದಿರುವುದೇ ಹೊರತು ಬಿಜೆಪಿಯು ಒಂದೇ ಒಂದು ಕಾನೂನು ಜಾರಿಗೆ ತಂದಿಲ್ಲ ಎಂದಿದ್ದಾರೆ.