ಇತ್ತೀಚಿನ ಸುದ್ದಿ
ನೌಕಾಪಡೆ ಗ್ಲೈಡರ್ ದುರಂತ: ಇಬ್ಬರು ಯೋಧರ ಬಲಿ, ದುರ್ಘಟನೆ ಏನು ಕಾರಣ?
October 4, 2020, 12:14 PM

ಕೊಚ್ಚಿ(reporterkarnataka news):
ಕೇರಳದ ಕೊಚ್ಚಿಯಲ್ಲಿ ನೌಕಾಪಡೆಯ ಗ್ಲೈಡರ್ ಪತನಗೊಂಡಿದೆ. ಇಂದು ಮುಂಜಾನೆ 7.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ಮೃತಪಟ್ಟವರನ್ನು ರಾಜೀವ್ ಝಾ ಮತ್ತು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ.
ಎಂದಿನಂತೆ ಗ್ಲೈಡರ್ ಹಾರಾಟ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ದುರಂತ ಕುರಿತು ನೌಕಾಪಡೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ. ಐಎನ್ಎಸ್ ಗರುಡ ನೌಕೆಯಿಂದ ಮೇಲಕ್ಕೆ ಹಾರಿದ ಕೂಡಲೇ ತೊಪ್ಪುಂಪಡಿ ಎಂಬಲ್ಲಿಯ ಸೇತುವೆ ಪಕ್ಕ ಗ್ಲೈಡರ್ ಪತನಗೊಂಡಿದೆ.