6:44 PM Wednesday25 - November 2020
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಭೃಂಗೀಶ್ ನೇಮಕ ಡಿಸೆಂಬರ್ 5 ರಾಜ್ಯ ಬಂದ್:  ಕನ್ನಡ ಪರ ಸಂಘಟನೆಗಳ ಸಭೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶ್ರೀರಾಮುಲು ಭೇಟಿ ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ

ಎಸ್ಸೆಸ್ಸೆಲ್ಸಿ ಫಲಿತಾಂಶ: ಮತ್ತೆ ಬಾಲಕೀಯರೆ ಮೇಲುಗೈ

August 10, 2020, 11:18 AM

ಬೆಂಗಳೂರು(reporter Karnataka)

ಕೊರೊನಾ ಸಂಕಷ್ಟದ ನಡುವೆಯೇ ನಡೆದ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಸಂಜೆ ಪ್ರಕಟಗೊಂಡಿದ್ದು ಶೇಕಡವಾರು ಫಲಿತಾಂಶದಲ್ಲಿ ಬಾಲಕೀಯರೆ ಮೇಲುಗೈ ಸಾಧಿಸಿದ್ದಾರೆ.

ಒಟ್ಟಾರೆಯಾಗಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಳೆದ ವರ್ಷ ಶೇ.73.70 ಫಲಿತಾಂಶ ದಾಖಲಾಗಿತ್ತು. ಒಟ್ಟು 8,11,050 ವಿದ್ಯಾರ್ಥಿಗಳಲ್ಲಿ
5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,28,734 ಅನುತ್ತೀರ್ಣ ರಾಗಿದ್ದಾರೆ. ಸರಕಾರಿ ಶಾಲೆಗಳ ಫಲಿತಾಂಶ ಶೇ. 72.79 ದಾಖಲಾಗಿದ್ದು, ಅನುದಾನಿತ ಶಾಲೆಗಳು ಶೇ.70.60 ಹಾಗೂ ಖಾಸಗಿ ಶಾಲೆಗಳಲ್ಲಿ ಶೇ. 82.31 ಫಲಿತಾಂಶ ದಾಖಲಾಗಿದೆ

ಬಾಲಕರು ಶೇ.66.41 ಉತ್ತೀರ್ಣರಾಗಿದ್ದಾರೆ 77.74 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ 6 ವಿದ್ಯಾರ್ಥಿಗಳು 625 ಅಂಕಕ್ಕೆ 625 ಅಂಕ ಪಡದಿದ್ದು, ಕಳೆದ ಬಾರಿ ಇಬ್ಬರು ಈ ಸಾಧನೆ ಮಾಡಿದ್ದರು

ಜಾಹೀರಾತು