ಇತ್ತೀಚಿನ ಸುದ್ದಿ
ಗಣರಾಜೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್ ನ್ ಭಾರತ ಭೇಟಿ ಅನುಮಾನ
December 23, 2020, 8:42 AM

ನವದೆಹಲಿ(reporterkarnataka news): ಲಂಡನ್ ನಲ್ಲಿ ಹೊಸ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್ ನ್ ಅವರ ಭಾರತ ಭೇಟಿ ಮೇಲೆ ಕರಿ ನೆರಳು ಬಿದ್ದಿದೆ. ಭೇಟಿ ರದ್ದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆದರೆ ಜನವರಿ 26ರಂದು ಇನ್ನು ಒಂದು ತಿಂಗಳು ದೂರ ಇರುವುದರಿಂದ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾವಾದವನ್ನು ಕೇಂದ್ರ ಸರ್ಕಾರ ಹೊಂದಿದೆ. ಗಣರಾಜೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಬೋರಿಸ್ ಜಾನ್ಸ್ ನ್ ಅವರಿಗೆ ಸರ್ಕಾರ ಆಮಂತ್ರಣ ನೀಡಿತ್ತು.