12:16 AM Thursday25 - February 2021
ಬ್ರೇಕಿಂಗ್ ನ್ಯೂಸ್
ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ

ಇತ್ತೀಚಿನ ಸುದ್ದಿ

ಮತ್ತೊಂದು ಬ್ಲೇಡ್ ಕಂಪನಿ ಬೆಳಕಿಗೆ:ಸೇವ್ ರಿಚಾರ್ಜ್ ಹೆಸರಿನಲ್ಲಿ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ; ದೂರು

October 14, 2020, 7:26 PM

ಶಿವಮೊಗ್ಗ(reporterkarnataka news):

ಆಗಾಗ ಬೇರೆ ಬೇರೆ ಹೆಸರಿನಲ್ಲಿ, ಬೇರೆ ಬೇರೆ ರೂಪದಲ್ಲಿ ಬ್ಲೇಡ್ ಕಂಪನಿಗಳು ತಲೆ ಎತ್ತುತ್ತಿದ್ದು, ಸಾರ್ವಜನಿಕರು ಆಗಾಗ ವಂಚನೆಗೊಳಗಾಗುತ್ತಲೇ ಇರುತ್ತಾರೆ. ಇದೀಗ ಮಲೆನಾಡು ಶಿವಮೊಗ್ಗ ಹಾಗೂ ಆಸುಪಾಸಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೊಬೈಲ್ ರಿಚಾರ್ಜ್ ನ ಹೆಸರಿನಲ್ಲಿ ಸೇವ್ ರೀಚಾರ್ಜ್ ಎಂಬ ವೆಬ್ ಸೈಟ್ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ ಎಂದು ಆರೋಪಿಸಿ ನೂರಾರು ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸೇವ್ ರೀಚಾರ್ಜ್ ಎಂಬ ವೆಬ್ ಸೈಟ್ ಮೊಬೈಲ್ ಗ್ರಾಹಕರಿಗೆ ಪ್ರತೀ ತಿಂಗಳು 249 ರೂ. ರಿಚಾರ್ಜ್ ಮಾಡಿ, ಪ್ರತಿ ದಿನ 2 ಜಿಬಿ ಡಾಟಾ, ಅನ್ ಲಿಮಿಟೆಡ್ ಹೊರಹೋಗುವ ಕರೆ, 100 ಎಸ್ಎಂಎಸ್ ಉಚಿತವಾಗಿ ನೀಡುತ್ತೇವೆ ಎಂದು  ನಂಬಿಸಿತ್ತು.

ಒಂದು ವರ್ಷದ ರಿಚಾರ್ಜ್ ಮಾಡುತ್ತೇವೆಂದು 

ಮೊಬೈಲ್ ಗ್ರಾಹಕರನ್ನು ನಂಬಿಸಿ 1250 ರೂ. ವರ್ಷದ ಪ್ಯಾಕೇಜ್ ಸಂಗ್ರಹಿಸಿ ವಂಚಿಸಿದೆ

ಎಂದು ಮೋಸ ಹೋದ ಗ್ರಾಹಕರು ಆರೋಪಿಸಿದ್ದಾರೆ.

ಒಂದೆರಡು ತಿಂಗಳು ರಿಚಾರ್ಜ್ ಮಾಡಿ ಇದೀಗ ವೆಬ್ ಸೈಟ್ ಅಪ್ ಗ್ರೇಡ್ ಹೆಸರಿನಲ್ಲಿ ರಿಚಾರ್ಜ್ ನಿಲ್ಲಿಸಿದೆ.  ರಾಜ್ಯದಲ್ಲಿ ಈ ಕಂಪನಿ ನಂಬಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೊಬೈಲ್ ಗ್ರಾಹಕರು ವರ್ಷದ ರಿಚಾರ್ಜ್ ಹಣ 1250 ರೂ. ಹಾಕಿದ್ದಾರೆ. ಕಂಪನಿಯು ಶಿವಮೊಗ್ಗ ಜಿಲ್ಲೆಯಾದ್ಯಂತ ಹಾಗೂ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಕಂಪನಿ ಪರವಾಗಿ ಪ್ರಚಾರ ಮಾಡಿ ರೀಚಾರ್ಜ್ ಮಾಡಲು ಪ್ರೇರೇಪಿಸಿ ಇದೀಗ ವಂಚನೆ ಮಾಡಿದೆ ಎಂದು ದೂರಲಾಗಿದೆ.

ರಿಚಾರ್ಜ್ ಬಗ್ಗೆ ಕಂಪನಿಯವರನ್ನು ಕೇಳಿದರೆ ದಬಾಯಿಸುತ್ತಾರೆ. ವಾಲೆಟ್ ಗೆ ಹಣ ಹಾಕಿರುವ ಗ್ರಾಹಕರು ಅಂಗಡಿಗಳಿಗೆ ಬಂದು ಕೇಳುತ್ತಿದ್ದು, ಅನುವಾರ್ಯವಾಗಿ ನಾವೇ ರಿಚಾರ್ಜ್ ಮಾಡಿಕೊಡುವಂತಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆಗಿರುವುದರಿಂದ ಕಂಪನಿ ಮುಟ್ಟುಗೋಲು ಹಾಕಿ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಿ ಎಂದು ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿಯವರಿಗೆ ದೂರು ನೀಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು