ಇತ್ತೀಚಿನ ಸುದ್ದಿ
ಫ್ರಾನ್ಸ್ ನಲ್ಲಿ 2ನೇ ಸುತ್ತಿನ ಕೊರೊನಾ ಅಲೆ: 40 ಸಾವಿರ ಮಂದಿಗೆ ಮಹಾಮಾರಿಯ ಸೋಂಕು
October 24, 2020, 9:14 AM

ಪ್ಯಾರಿಸ್: ಫ್ರಾನ್ಸ್ ಎರಡನೆ ಕೊರೊನಾ ಅಲೆ ಅಬ್ಬರಿಸಿದೆ. ಶುಕ್ರವಾರ ಒಂದೇ ದಿನದಲ್ಲಿ 40,000 ಹೊಸ ಕೊರೊನಾ ಪ್ರಕರಣ ವರದಿಯಾಗಿದೆ. ಕೊರೊನಾ ಎರಡನೆ ಅಲೆ ಹಿನ್ನೆಲೆಯಲ್ಲಿ ಪ್ಯಾರಿಸ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ನಿರ್ಬಂಧ ವನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ದೇಶದಲ್ಲಿ ನ ನಿರ್ಬಂಧ ಡಿಸೆಂಬರ್ ಮೊದಲ ವಾರದ ತನಕ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲೆ ಮಾರ್ಕೋನ್ ತಿಳಿಸಿದ್ದಾರೆ.