ಇತ್ತೀಚಿನ ಸುದ್ದಿ
ನದಿ ಹಿನ್ನೀರು ಪ್ರದೇಶದಲ್ಲಿ ಮೀನುಗಾರಿಕೆ ಇಲಾಖೆಯಿಂದ ಪಂಜರ ಮೀನು ಕೃಷಿಗೆ ಅವಕಾಶ
August 13, 2020, 3:02 AM

ಮಂಗಳೂರು(reporterkarnataka news): ದ.ಕ ಜಿಲ್ಲೆಯಲ್ಲಿ ನದಿ ಭಾಗ/ಹಿನ್ನೀರು ಪ್ರದೇಶಗಳಲ್ಲಿ, ಪಂಜರದಲ್ಲಿ ಮೀನುಕೃಷಿ ಕೈಗೊಳ್ಳಲು ವಿಫುಲ ಅವಕಾಶವಿರುತ್ತದೆ. ಇದರಿಂದ ತರಬೇತಿ ಪಡೆದವರಿಗೆ ನದಿ ಹಿನ್ನೀರು ಪ್ರದೇಶಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನ, ಸೌಲಭ್ಯ, ತರಬೇತಿ ಕಲ್ಪಿಸಿಕೊಡಲಾಗುತ್ತದೆ.
ಆಸಕ್ತ ಯುವಕರು, ಯುವತಿಯವರು ತಮ್ಮ ಹೆಸರನ್ನು ಆಗಸ್ಟ್ 25 ರೊಳಗೆ ಮೀನುಗಾರಿಕೆ ಸಹಾಯಕ ನಿರ್ದೆಶಕರು (ಶ್ರೇಣಿ-2) ಮಂಗಳೂರು, ಮಾಹಿತಿ ಕೇಂದ್ರ ಕಟ್ಟಡ, ಸೌತ್ವಾರ್ಫ್ ಬಂದರು ಮಂಗಳೂರು ಇಲ್ಲಿ ನೊಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೆಶಕರು (ಶ್ರೇಣಿ-2) ಮಂಗಳೂರು, ಮಾಹಿತಿ ಕೇಂದ್ರ ಕಟ್ಟಡ, ಸೌತ್ವಾರ್ಫ್ ಬಂದರು ಮಂಗಳೂರು, ಮೊಬೈಲ್ ಸಂಖ್ಯೆ: 9606313259 ಸಂರ್ಪಕಿಸುವಂತೆ ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.