5:10 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

Exclusive Update : ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯ ಮಧ್ಯಾಹ್ನ ತನಕದ ಫಲಿತಾಂಶ ಇಲ್ಲಿದೆ

December 30, 2020, 2:03 PM

ಮಂಗಳೂರು(Reporter Karnataka)

ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಡಿ.22 ಮತ್ತು 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆಯಿಂದಲೇ ಎಲ್ಲಾ ಮತ ಎಣಿಕೆ ಕೇಂದ್ರದಲ್ಲಿ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಧ್ಯಾಹ್ನ 1:30 ಗಂಟೆ ವರೆಗೆ ಲಭ್ಯವಾದ ಫಲಿತಾಂಶದ ವಿವರ :

➤ ಬೆಳಪು ಗ್ರಾಮ ಪಂಚಾಯತ್ ನಲ್ಲಿ ಎಸ್ ಡಿಪಿಐ ಬೆಂಬಲಿಯ ಫಹೀಂ ಮತ್ತು ನಫೀಸಾ ಬಾನು ಗೆಲುವು ಪಡೆದಿದ್ದಾರೆ.

➤ ಕೊಯಿಲ ಗ್ರಾ.ಪಂ.ನಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಸಫಿಯಾ, ಹಸನ್ ಸಜ್ಜಾದ್ ಹಾಗೂ ಕಾಂಗ್ರೆಸ್ ಬೆಂಬಲಿತ ಎನ್. ನೀತಾ ಗೆದ್ದಿದ್ದಾರೆ.

➤ ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಆಯಿಷಾ ಬೇಗಂ ಮತ್ತು ಸಿದ್ದೀಕ್ ಯು.ಪಿ. ಗೆದ್ದಿದ್ದಾರೆ.

➤ ಉದ್ಯಾವರ ಗ್ರಾಮದಲ್ಲಿ ಕಾಂಗ್ರೆಸ್ 5, ಬಿಜೆಪಿ 4 ಸ್ಥಾನಗಳಲ್ಲಿ ವಿಜಯಿಯಾಗಿವೆ.

➤ ಬೊಳಿಯಾರು 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಬೂಬಕರ್ ನಝೀರ್, ಜೆಸಿಂತಾ ಪಿಂಟೊ ಮತ್ತು ಮೈಮೂನಾ ಜಯ ಸಾಧಿಸಿದ್ದಾರೆ.

➤ ಹಳೆಯಂಗಡಿ ಗ್ರಾಮಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾಸರ್ ಅವರು ಗೆದ್ದಿದ್ದಾರೆ.

➤ ಇನ್ನಂಜೆಯಲ್ಲಿ ಅನಿಯಾ ಮತಾಯಿಸ್ ಮತ್ತು ಸುನೀತಾ ಗೆದ್ದಿದ್ದಾರೆ.

➤ ಸುಳ್ಯ ಕಲ್ಮಡ್ಕ ಗ್ರಾ.ಪಂ.ನ ಪಕ್ಷೇತರ ಅಭ್ಯರ್ಥಿ ಮೀನಾಕ್ಷಿ ಬಾಲಕೃಷ್ಣ ಬೊಮ್ಮೆಟ್ಟಿ, ಮೋಹಿನಿ ಲತೇಶ್ ಮತ್ತು ಹರೀಶ್ ಮಾಳಪ್ಪಮಕ್ಕಿ ಗೆಲುವು ಸಾಧಿಸಿದ್ದಾರೆ.

➤ ಸುಳ್ಯದ ದೇವಚಳ್ಳ ಗ್ರಾಮದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು, ಲೀಲಾವತಿ ಸೇವಾಜೆ, ಬಿಜೆಪಿ ಬೆಂಬಲಿತ ಪ್ರೇಮಲತಾ ಗೆದ್ದಿದ್ದಾರೆ.

➤ ಮುದ್ರಾಡಿಯ 15 ಸ್ಥಾನಗಳಲ್ಲಿ ಐದು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ.

➤ ಹಳೆಯಂಗಡಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾದರ್, ಜಲಜ, ನಿರಂಜನ್, ಬಿಜೆಪಿ ಬೆಂಬಲಿತ ಚಂದ್ರಿಕಾ, ನಾಗರಾಜ್ ವಿಜಯ ಗೆದ್ದಿದ್ದಾರೆ.

➤ ಪುತ್ತೂರಿನ ಕೆಯ್ಯೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ತಾರಾನಾಥ ಕಂಪ, ವಿಜಯ ಕುಮಾರ್, ಸುಭಾಷಿಣಿ, ಕಾಂಗ್ರೆಸ್ ಬೆಂಬಲಿಯ ಅಬ್ದುಲ್ ಖಾದರ್ ಮೇರ್ಲ, ಅಮಿತಾ ಎಚ್ ರೈ ಗೆದ್ದಿದ್ದಾರೆ.

➤ ಸುಳ್ಯದ ಪಂಜದಲ್ಲಿ ಕೂತ್ಕುಂಜದಲ್ಲಿ ಬಿಜೆಪಿ ಬೆಂಬಲಿತ ನೇತ್ರಾವತಿ ಗೆದ್ದಿದ್ದಾರೆ.

➤ ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರಾದ ರವಿರಾಜ್ ಮತ್ತು ದಿವ್ಯಾ ಜಯ ಗೆದ್ದಿದ್ದಾರೆ.

➤ ಕುತ್ಯಾರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸ್ಟ್ಯಾನಿ, ಬಿಜೆಪಿ ಬೆಂಬಲಿತ ಜನಾರ್ಧನ ಆಚಾರ್ಯ, ದಿವ್ಯಾ ಗೆಲುವು ಸಾಧಿಸಿದ್ದಾರೆ.

➤ ಚೇರ್ಕಾಡಿ ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತ ಪ್ರಭಾಕರ ನಾಯ್ಕ ಗೆದ್ದಿದ್ದಾರೆ. ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತ ಮಧುರಾ ನಾಯ್ಕ್ ಮತ್ತು ಪ್ರತಿಮಾ ಸುರೇಶ್ ಗೆದ್ದಿದ್ದಾರೆ.

➤ ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಅನಿಲ್, ಪ್ರತಿಮಾ ಗೆದ್ದಿದ್ದಾರೆ.

➤ ಕೊಣಾಜೆ 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ದೇವಣ್ಣ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ವನಿತಾಗೆ ವಿಜಯ.

➤ ಪುತ್ತೂರು ಬಡಗನ್ನೂರು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ವಸಂತ, ಹೇಮಾವತಿ, ರವಿಚಂದ್ರ, ದಮಯಂತಿ, ಪುಷ್ಪಲತಾ ಹಾಗೂ ಪಕ್ಷೇತರ ಲಿಂಗಪ್ಪ ಗೆದ್ದಿದ್ದಾರೆ.

➤ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ಮುರಳೀಕೃಷ್ಣ ಭಟ್ ಮತ್ತು ಗೀತಾ ಸಂತೋಷ್ ಗೆ ಜಯ.

➤ ಗುರುಪುರದ ಮೂಳೂರು 2ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಉದಯ ಭಟ್, ಚಂದ್ರಾವತಿ ಮತ್ತು ಬಾಲಕೃಷ್ಣರಿಗೆ ಜಯ.

➤ ತಲಪಾಡಿಯಲ್ಲಿ ಮೊದಲ ಬಾರಿ ಎಸ್ ಡಿಪಿ ಖಾತೆ ತೆರದಿದೆ. 2ನೇ ವಾರ್ಡ್ ನಲ್ಲಿ ಝಾಹಿದ್, 3ನೇ ವಾರ್ಡ್ ಮಹಮ್ನದ್ ಶಾಫಿ ವಿಜಯ ಪತಾಕೆ ಹಾರಿಸಿದ್ದಾರೆ.

➤ ಚಾರ್ಮಾಡಿ ಗ್ರಾ.ಪಂ.ನಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳಾದ ಆಯಿಷಾ ಬೇಗಂ ಮತ್ತು ಸಿದ್ದೀಕ್ ಯು.ಪಿ. ಗೆದ್ದಿದ್ದಾರೆ.

➤ ಕೆಮ್ರಾಲ್ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ನವೀನ್ ಸಾಲಿಯಾನ್, ಸುರೇಶ್ ಪಂಜ ವಿಜೇತರಾಗಿದ್ದಾರೆ.

➤ ಪಡುತೋನ್ಸೆ ಗ್ರಾಪಂ 2 ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಆಶಾ ಹಾಗೂ ನಿತ್ಯಾನಂದ ಕೆಮ್ಮಣ್ಣು ವಿಜಯಿಗಳಾಗಿದ್ದಾರೆ.

➤ ತೆಕ್ಕಾರು ಗ್ರಾಮ ಪಂಚಾಯತ್ ನಲ್ಲಿ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ. ಶೇಖರ್ ಪೂಜಾರಿ, ಹಕೀಂ ಗೆದ್ದವರು.

➤ ಉಡುಪಿಯ ಪಡುತೋನ್ಸೆ ಒಂದನೇ ವಾರ್ಡ್ ನಲ್ಲಿ ಧೀರೇಂದ್ರ ಮತ್ತು ಲೋಕೇಶ್ ಗೆಲುವು ಸಾಧಿಸಿದ್ದಾರೆ.

➤ ಸುಬ್ರಹ್ಮಣ್ಯದ 3ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ದಿನೇಶ್ ರಾವ್, ವಿದ್ಯಾ ಯಶೋಧ ಕೃಷ್ಣ ಗೆದ್ದಿದ್ದಾರೆ.

➤ ಶಿರಾಡಿಯಲ್ಲಿ ರಾಧಾ ಮತ್ತು ಲಕ್ಷಣ ಗೌಡ ಗೆದ್ದಿದ್ದಾರೆ.

➤ ವಾರಂಬಳ್ಳಿ ಒಂದನೇ ವಾರ್ಡ್ ನಲ್ಲಿ ಗುಲಾಬಿ, ಜ್ಯೋತಿ, ಮಾಧವ ಗೆಲುವು ಸಾಧಿಸಿದ್ದಾರೆ.

➤ ಕುಟ್ಟುಪಾಡಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಕಿರಣ್ ಗೋಗಟೆ, ಮಾಧವಿ ಗೆದ್ದಿದ್ದಾರೆ.

➤ ಕುರ್ಕಾಲು ಕಾಂಗ್ರೆಸ್ ಬೆಂಬಲಿತ ವಿನ್ಸೆಂಟ್ ರೋಡ್ರಿಗಸ್ ಮತ್ತು ಪ್ರಮೀಳಾ ಆಚಾರ್ಯ ಗೆದ್ದಿದ್ದಾರೆ.

➤ ಕೊಣಾಜೆ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಮುಹಮ್ಮದ್ ಇಕ್ಬಾಲ್, ಬಿಜೆಪಿ ಬೆಂಬಲಿತ ಗೀತಾ ಗೆದ್ದಿದ್ದಾರೆ.

➤ ಪಲಿಮಾರು ಗ್ರಾಮ ಪಂಚಾಯತ್ ನಲ್ಲಿ ಅಮಿತ ಮತ್ತು ಪ್ರವೀಣ್ ಕುಮಾರ್ ಗೆ ಗೆಲುವು

➤ ಅಂಬ್ಲಮೊಗರು ಗ್ರಾಮ ಪಂಚಾಯತ್ನ 1ನೇ ವಾರ್ಡ್ ನ ಮೂರು ಸ್ಥಾನಗಳಲ್ಲಿ 2 ಕಾಂಗ್ರೆಸ್, 1 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಬೆಂಬಲಿತ ರವೀಂದ್ರ ಕುಕ್ಯಾನ್, ಮಮ್ತಾಝ್ ಬಿಜೆಪಿ ಬೆಂಬಲಿತ ಶ್ವೇತಾ ಗೆದ್ದಿದ್ದಾರೆ.

➤ ಪಲಿಮಾರು ನಂದಿಕೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಮಹೇಶ್ ಶೆಟ್ಟಿ, ರಶ್ಮಿ ಗೆಲುವು

➤ ಪಾವೂರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ರಿಯಾಝ್ ಮತ್ತು ರತಿಕಲಾಗೆ ಜಯ. ಬಿಜೆಪಿ ಬೆಂಬಲಿತ ದಯಾನಂದ, ಮಮತಾಗೆ ಗೆಲುವು.

➤ ಮುಂಡಾಜೆ ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತ ಗಣೇಶ ಬಂಗೇರ, ಜಗದೀಶ್ ಗೆಲುವು. ನೆರಿಯಾ ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತ ಸಜಿತಾ, ಸಚಿನ್ ಗೆಲುವು.

➤ ಸುಲ್ಕೇರಿಯಲ್ಲಿ ಬಿಜೆಪಿ ಬೆಂಬಲಿತ ನಾರಾಯಣ ಪೂಜಾರಿ, ಪ್ರೇಮಾಗೆ ಗೆಲುವು

➤ ಪಡುಬಿದ್ರಿ ಕಂಚಿನಡ್ಕದಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶಾಫಿ ಮತ್ತು ಜ್ಯೋತಿ‌ ಮೆನನ್ ಗೆಲುವು

➤ ಕಟಪಾಡಿ ಏಣಗುಡ್ಡೆ ಬಿಜೆಪಿ ಬೆಂಬಲಿತರಾದ ಜೋಸೆಫ್ ಮೊಂತೆರೋ ಮತ್ತು ಸುಗುಣಾ ಪೂಜಾರ್ತಿ ಗೆಲುವು

➤ ಶಿರಿಯಾರ್ ಒಂದನೇ ವಾರ್ಡ್ ನಲ್ಲಿ ಹರೀಶ್ ಕಾಂಚನ್, ಸಂಜು ಪೂಜಾರಿಗೆ ಗೆಲುವು

➤ ಅಮ್ಮುಂಜೆಯಲ್ಲಿ ರವೀಂದ್ರ ಸುವರ್ಣ, ಪ್ರಮೀಳಾ, ರೊನಾಲ್ಡ್ ಡಿಸೋಜ, ಕಾರ್ತಿಕ್ ಬಲ್ಳಾಳ್, ಭಾಗ್ಯರಾಜ್ ಗೆಲುವು

➤ ಹಂದಾಡಿ ಗ್ರಾಮಪಂಚಾಯತ್ ನ ಬೆಣ್ಣೆಕುದ್ರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ 144 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಶಿವಪೂಜಾರಿ ಅವರನ್ನು 34 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪ್ರಸಾದ್ 37 ಮತ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಿವಪೂಜಾರಿ 110 ಮತ ಪಡೆದಿದ್ದಾರೆ.

➤ ಪಡಂಗಡಿ ಗ್ರಾಮದ ಗಾಯತ್ರಿ ಹಾಗೂ ರಿಚರ್ಡ್ ಗೋವಿಯಸ್ ಗೆಲುವು ಸಾಧಿಸಿದ್ದಾರೆ.

➤ ಬ್ರಹ್ಮಾವರದ ಯಡ್ತಾಡಿ 2ನೇ ವಾರ್ಡ್ ನಲ್ಲಿ ಪಕ್ಷೇತರ ಲೋಕೇಶ್ ನಾಯಕ್ ಪ್ರತಿಸ್ಪರ್ಧಿ ರಾಮನಾಯಕ್ ಅವರನ್ನು 80 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

➤ ನೆಲ್ಯಾಡಿ ಗ್ರಾಮದ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಇಕ್ಬಾಲ್ 283 ಮತಗಳು ಮತ್ತು ರೇಷ್ಮಾ 365 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

➤ ಯಡ್ತಾಡಿ 1 ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಅಮೃತ ಪೂಜಾರಿ 321 ಮತಗಳನ್ನು ಪಡೆಯುವ ಮೂಲಕ, ಪ್ರತಿಸ್ಪರ್ಧಿ ರತ್ನಾಕರ್ ಪೂಜಾರಿ ಅವರ ವಿರುದ್ಧ 90 ಮತದಿಂದ ಗೆಲುವು ಸಾಧಿಸಿದ್ದಾರೆ.

➤ ಕುರ್ಕಾಲು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಪ್ರವೀಣ್ ಕುಮಾರ್, ಮಲ್ಲಿಕಾ ಗೆಲುವು ಸಾಧಿಸಿದ್ದಾರೆ.

➤ ಉಡುಪಿಯ ಮಣಿಪುರ – 2 ವಾರ್ಡ್ ನಲ್ಲಿ ಪ್ರಭಾತ್ ಕುಮಾರ್ ಗೆ 290 ಮತ ಅಂತರದಲ್ಲಿ ಗೆಲುವು.

➤ ಬಳ್ಪ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ್ ಮತ್ತು ಬಿಜೆಪಿ ಬೆಂಬಲಿತ ವಿನೋದ್ ಬೊಳ್ಮಲೆ ಗೆಲುವು ಸಾಧಿಸಿದ್ದಾರೆ.

➤ ಕಾರ್ಕಳ ತಾಲೂಕಿನಲ್ಲಿ ವಿವಿಧ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ವಿಜೇತರಾಗಿದ್ದಾರೆ. ದುರ್ಗಾ ಗ್ರಾ.ಪಂ.ನಲ್ಲಿ ರಾಜೇಶ್ ಗೋರೆ, ಬೆಳ್ಮಣ್ ಗ್ರಾ.ಪಂ ನ ಸುರೇಶ್ ಪೂಜಾರಿ, ಬೋಳ ಗ್ರಾ.ಪಂ ನಲ್ಲಿ ಕಿರಣ್ ಶೆಟ್ಟಿ ವಿಜೇತರಾಗಿದ್ದಾರೆ.

➤ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತರಾದ ಶ್ರೀರಾಮ ಪಕ್ಕಳ ಮತ್ತು ವತ್ಸಲಾ ಗೆಲುವು ಸಾಧಿಸಿದ್ದಾರೆ.

➤ ಕಾಪು ತಾಲೂಕು ಬೆಳಪು 3ನೇ ವಾರ್ಡ್ ನಲ್ಲಿ ಪ್ರಕಾಶ್ ರಾವ್ (486) ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ (405) ವಿರುದ್ಧ ಗೆಲುವು.

➤ ಮೂಲ್ಕಿ ಹೋಬಳಿಯ ಬಳ್ಕುಂಜೆ ಗ್ರಾಮ ಪಂಚಾಯತಿಯ ಕರ್ನಿರೆ 1 ರಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ಶೆಟ್ಟಿ (277) ಹಾಗೂ ವನಜ ಕೋಟ್ಯಾನ್ (251) ವಿಜೇತರಾಗಿದ್ದಾರೆ.

➤ ಹೆಜಮಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತೆ ಫರೀದಾ (351) ಅವರು ಆಶಾ (199) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

➤ 80 ಬಡಗಬೆಟ್ಟು ವಾರ್ಡ್ ನಲ್ಲಿ ಗಣಪತಿ ನಾಯಕ್, ಲಕ್ಷ್ಮೀ ಶೆಟ್ಟಿ ವಿಜಯ ಸಾಧಿಸಿದ್ದಾರೆ.

➤ ಬ್ರಹ್ಮಾವರದ 20 ಆರೂರು 4ನೇ ವಾರ್ಡ್ ಗಣೇಶ್ ತಮ್ಮ ಪ್ರತಿಸ್ಪರ್ಧಿ ವಿರುದ್ದ 247 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ.

➤ಮಂಗಳೂರಿನ ತಲಪಾಡಿ 3ನೇ ವಾರ್ಡ್ ನಲ್ಲಿ ಎಸ್ ಡಿಪಿಐ ಬೆಂಬಲಿತರಾದ ಇಸ್ಮಾಯಿಲ್ ಶಾಫಿ (430 ಮತ), ಸುಮಾಯ್ಯ (450 ಮತ) ಗಳಿಂದ ಜಯ ಸಾಧಿಸಿದ್ದಾರೆ.

➤ ಮಜೂರು ಗ್ರಾ.ಪಂ‌. ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತರಾದ ಮಧುಸೂಧನ್ ಸಾಲಿಯಾನ್ ಮತ್ತು ವನಿತಾ ಗೆಲುವು

➤ ಎಲ್ಲೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ರವಿರಾಜ್ ರಾವ್ (377) ಮತ್ತು ಉಷಾ ಪೂಜಾರಿ (264) ಅವರಿಗೆ ಗೆಲುವು.

➤ ಕುರ್ಕಾಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾದ ಪ್ರವೀಣ್ ಕುರ್ಕಾಲು ಮತ್ತು ಮಲ್ಲಿಕಾ ವಿಜಯ ಸಾಧಿಸಿದ್ದಾರೆ.

➤ ಪಡುಬಿದ್ರಿ ಗ್ರಾ.ಪಂ. ಪಾದೆಬೆಟ್ಟು ವಾರ್ಡ್ ಬಿಜೆಪಿ ಬೆಂಬಲಿತರಾದ ಶೋಭಾ ಜಿ. ಶೆಟ್ಟಿ ಮತ್ತು ಸಂದೇಶ ಶೆಟ್ಟಿಗೆ ಗೆಲುವಾಗಿದೆ.

➤ ಅರಂತೋಡು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟರಮಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಇನ್ನೋರ್ವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಕೂಡ ಗೆದ್ದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು