12:43 AM Tuesday19 - January 2021
ಬ್ರೇಕಿಂಗ್ ನ್ಯೂಸ್
ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ…

ಇತ್ತೀಚಿನ ಸುದ್ದಿ

#EducationInTulu ಟ್ವೀಟ್ ತುಳುನಾಡ್ ಅಭಿಯಾನ ಏನಿದು ? ಇಲ್ಲಿದೆ ಕಂಪ್ಲೀಟ್ ಮಾಹಿತಿ

August 14, 2020, 1:30 AM

ಜಿ.ಎನ್.ಎ.
info.reporterkarnataka@gmail.com

ಪ್ರಾದೇಶಿಕ ಭಾಷೆಯಾಗಿ ಲಕ್ಷಾಂತರ ಜನರ ಮಾತೃಭಾಷೆಯಾಗಿದ್ದ ಹೊರತಾಗಿಯೂ ಶೈಕ್ಷಣಿಕ ಭಾಷಾ ಸ್ಥಾನಮಾನ ಸಹಿತ ಯಾವುದೇ ರೀತಿಯ ಸ್ಥಾನಮಾನ ತುಳು ಭಾಷೆಗೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಮನವಿ ಪ್ರತಿಭಟನೆ ನಡೆದರೂ ಯಾವುದೇ ಪ್ರತಿಫಲ ಇಲ್ಲಿತನಕ ದೊರಕಿಲ್ಲ. ಸಾಕಷ್ಟು ಭಾರಿ ಆಶಾದಾಯಕ ಘೋಷಣೆಗಳು ರಾಜಕಾರಣಿಗಳಿಂದ ಬಂದಿದ್ದರು ಅದು ಘೋಷಣೆಯಾಗಿಯೇ ಉಳಿದಿದೆ. ಈಗ ಮತ್ತೊಮ್ಮೆ ತುಳುನಾಡಿನ ಮಕ್ಕಳಿಗೆ ತುಳುವಲ್ಲಿಯೇ ಶಿಕ್ಷಣ ಸಿಗಬೇಕೆನ್ನುವ ಮಾತು ಮುನ್ನೆಲೆಗೆ ಬರುತ್ತಿದೆ.

ಹೌದು, ಕೊರೊನಾ ಸಾಂಕ್ರಾಮಿಕದ ಬಳಿಕ ಸದ್ಯಕ್ಕೆ ಕೇಂದ್ರ ಸರಕಾರವು ಜಾರಿಗೆ ತರಲು ನಿರ್ಧರಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ 5 ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾಭ್ಯಾಸ ಕೊಡಬೇಕೆಂಬ ನಿಯಮವಿದ್ದು.ಈ ನೀತಿಯಲ್ಲಿ ತುಳು ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ನಿಯಮ ಸೇರಿಸಬೇಕೆಂಬುದು ತುಳುವರ ಆಶಯವಾಗಿದೆ. ತುಳು ಭಾಷೆಯಲ್ಲಿ ಶಿಕ್ಷಣ ತುಳುನಾಡಿನ ಮಕ್ಕಳಿಗೆ ದೊರೆಯಬೇಕಾಗಿದೆ. ತುಳುವರ ಮಕ್ಕಳಿಗೂ ತುಳು ಭಾಷೆಯಲ್ಲಿ ಕಲಿಯುವ ಹಕ್ಕು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಸರಕಾರದ ಗಮನ ಸೆಳೆಯುವ ಅನಿವಾರ್ಯತೇ ಇದೆ. ಈ ದಿಸೆಯಲ್ಲಿ ಜೈ ತುಳುನಾಡ್ ಸಂಘಟನೆ #EducationInTulu ಟ್ವೀಟ್ ತುಳುನಾಡ್ ಅಭಿಯಾನವನ್ನು ಆಯೋಜನೆ ಮಾಡಿದೆ. ಆಗಸ್ಟ್ 16ರಂದು ಈ ಟ್ವೀಟ್ ಅಭಿಯಾನ ನಡೆಯಲಿದ್ದು ಈ ಮೂಲಕ ಜನ ಪ್ರತಿನಿಧಿಗಳ ಗಮನ ಸೆಳೆಯಲು ತಯಾರಿ ನಡೆಸಲಾಗುತ್ತಿದೆ.
ತುಳು ಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ತುಳು ಭಾಷೆ ಶೈಕ್ಷಣಿಕ ಭಾಷೆಯಾಗಿ ಇನ್ನಷ್ಟು ಪ್ರಗತಿಯಾಗಲಿದೆ.
ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಸರ್ವ ತುಳು ಅಭಿಮಾನಿಗಳು ಪಾಲ್ಗೊಂಡು #EducationInTulu ಎಂಬ ಹ್ಯಾಸ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಜನಪ್ರತಿನಿಧಿಗಳನ್ನ ಎಚ್ಚರಿಸಬೇಕಾಗಿದೆ ಎನ್ನುತ್ತಾರೆ ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ ಮೂಲ್ಯ.

ಶಿಕ್ಷಕರು ರೆಡಿ :
ಜೈ ತುಳುನಾಡ್ ಸಂಘಟನೆ ನಿರಂತರವಾಗಿ ತುಳು ಕಲಿಕೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಈಗಾಗಲೇ ಬಹಳಷ್ಟು ಮಂದಿ ತುಳು ಲಿಪಿ ಹಾಗೂ ಭಾಷಾ ಬೋಧನೆ ಸಾಮರ್ಥ್ಯ ಪಡೆದುಕೊಂಡಿದ್ದಾರೆ ಒಂದು ವೇಳೆ ಸರಕಾರ ತುಳುವಲ್ಲಿ ಶಿಕ್ಷಣ ನೀಡಲು ಅಸ್ತು ಎಂದರೆ ಶಿಕ್ಷಕರಿಗಾಗಿ ಚಿಂತಿಸುವ ಅಗತ್ಯ ಇಲ್ಲ ಎನ್ನುತ್ತಾರೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ

ಇತ್ತೀಚಿನ ಸುದ್ದಿ

ಜಾಹೀರಾತು