ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಮಾದಕ ದ್ರವ್ಯ ತನಿಖೆ: ಇಡಿ ಅಧಿಕಾರಿಗಳ ಎಂಟ್ರಿ
September 10, 2020, 7:45 AM

ಬೆಂಗಳೂರು(reporterkarnataka news): ಚಂದನವನದಲ್ಲಿ ಸಂಚಲನ ಮೂಡಿಸಿರುವ ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಇ ಡಿ ಅಧಿಕಾರಿಗಳು ಎಂಟ್ರಿ ಮಾಡಿದ್ದಾರೆ. ಸಿಸಿಬಿ ಮುಖ್ಯ ಕಚೇರಿಗೆ ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇದು ಕುತೂಹಲ ಕೆರಳಿಸಿದೆ. ಮಾದಕ ದ್ರವ್ಯ ಜಾಲದ ಆರೋಪಿಗಳು ಹವಾಲ ಮೂಲಕ ಹಣ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದರೇ ಎಂಬ ಆಯಾಮದ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆಯಿದೆ.
ಸಿಸಿಬಿ ಬಂಧನದಲ್ಲಿರುವ ವಿರೇನ್ ಖನ್ನಾ ಹೆಸರು ಹವಾಲ ಹಗರಣದಲ್ಲಿ ಕೂಡ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇ ಡಿ ಅಧಿಕಾರಿಗಳ ಎಂಟ್ರಿ ಕುತೂಹಲ ಕೆರಳಿಸಿದೆ.
ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಎನ್ ಸಿ ಬಿ, ಮಾದಕ ದ್ರವ್ಯ ಜಾಲದ ಆರೋಪಿಗಳನ್ನು ಮೊದಲು ಬಂಧಿಸಿತ್ತು.