ಇತ್ತೀಚಿನ ಸುದ್ದಿ
ಕೇಂದ್ರ ಸರಕಾರದಿಂದ ಇಡಿ ದುರ್ಬಳಕೆ ಆರೋಪಿಸಿ ಮಂಗಳೂರಿನಲ್ಲಿ ಪಿಎಫ್ ಐ ಪ್ರತಿಭಟನೆ
December 11, 2020, 12:38 PM

ಮಂಗಳೂರು(reporter Karnataka): ಕೇಂದ್ರ ಬಿಜೆಪಿ ಸರಕಾರ ಜಾರಿ ನಿರ್ದೇಶನಾಲಯ(ಇಡಿ)ವನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ) ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಇಡಿ ಆರೆಸ್ಸೆಸ್ ಅಸ್ತ್ರವಾಗಿ ಉಪಯೋಗಿಸುವುದನ್ನು ತಡೆಯೋಣ. ಇಡಿ ದುರ್ಬಳಕೆ ವಿರುದ್ದ ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರದ ಹೆಸರಿನಲ್ಲಿ ಜೈಲಿಗೆ ಹೋಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಇಡಿ ದಾಳಿ ಯಾಕೆ ನಡೆಯುತ್ತಿಲ್ಲ ಎಂದು
ಪ್ರಶ್ನಿಸಿದ ಪ್ರತಿಭಟನಾಕಾರರು, ಸಂವಿಧಾನ ಪರವಿದ್ದವರಿಗೆ ಇಡಿಯ ಚಾಟಿ ಬೀಸಲಾಗುತ್ತಿದೆ ಎಂದು ಆರೋಪಿಸಿದರು.