12:16 PM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

#ಈ_ಸಲ_ಕಪ್_ನಮ್ದಾಗಲಿಲ್ಲ : ಆರ್‌ಸಿಬಿಗೆ ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಎಚ್ ವಿರುದ್ಧ 6 ವಿಕೆಟ್ ಸೋಲು

November 6, 2020, 11:25 PM

ಅಬುದಾಬಿ (Reporter Karnataka News)

ಫೈನಲ್ ತಲುಪುವ ಹಾಗೂ ಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಸ್‌ಆರ್‌ಎಚ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತು ಡ್ರೀಮ್ ಇಲೆವನ್ ಐಪಿಎಲ್ 2020ಯ ಪಯಣವನ್ನು ಮುಕ್ತಾಯಗೊಳಿಸಿದೆ.


ಸತತ ನಾಲ್ಕು ಸೋಲುಗಳ ಬಳಿಕವೂ ಫ್ಲೆ ಆಫ್ ತಲುಪಿದ್ದ ಬೆಂಗಳೂರು ಗೆಲ್ಲೂವ ಫೇವರಿಟ್ ತಂಡವಾಗಿತ್ತು ಆದರೆ ಶುಕ್ರವಾರ ಅಬುದಾಬಿಯಲ್ಲಿ ನಡೆದ ಪಂದ್ಯದಲ್ಲಿ ಹೈದರಬಾದ್ ತಂಡದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಕುಸಿತ ಕಂಡ ಬೆಂಗಳೂರು ಸೋಲನುಭವಿಸಬೇಕಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ನೂರು ರನ್ ತಲುಪುವುದು ಕಷ್ಟವೆನಿಸಿತ್ತು. ಈ ಸಂದರ್ಭ ಉತ್ತಮ ಕಾಣಿಕೆ ನೀಡಿದ ಎ.ಬಿ.ಡಿ ವಿಲಿಯರ್ಸ್ ಅವರ 56 ರನ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಜೇಸನ್ ಹೋಲ್ಡರ್ 3 ಹಾಗೂ ನಟರಾಜನ್ 2 ವಿಕೆಟ್ ಬೆಂಗಳೂರು ಬ್ಯಾಟಿಂಗ್ ವಿಭಾಗವನ್ನು ಕಾಡಿದರು.


ಈ ಸಾಧಾರಣ ಮೊತ್ತ ಬೆನ್ನಟ್ಟಿದ ಹೈದರಾಬಾದ್ ಒಂದು ಹಂತದಲ್ಲಿ ಕುಸಿತ ಕಂಡರೂ ಕೀವಿಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ವಿಂಡೀಸ್ ಕಪ್ತಾನ ಜೇಸನ್ ಹೋಲ್ಡರ್ ಜವಾಬ್ದಾರಿಯುತ ಜತೆಯಾಟದಿಂದ 6 ವಿಕೆಟ್‌ಗಳ ಗೆಲುವು ದಾಖಲಿಸಿ ಕ್ವಾಲಿಫಯರ್ ಪ್ರವೇಶಿಸಿತು. ಕೇನ್ ವಿಲಿಯಮ್ಸ್ ಅವರು ಅಜೇಯ 50 ರನ್ ಗಳಿಸಿದರು. ಹೋಲ್ಡರ್ 24 ರನ್ ಗಳಿಸಿ ಔಟಾಗದೆ ಉಳಿದರು. ಮುರಿಯದ ಐದನೇ ವಿಕೆಟ್‌ಗೆ ಈ ಜೋಡಿಯಿಂದ 65 ರನ್ ಪೇರಿಸಲ್ಪಟ್ಟಿತು.
ಬೆಂಗಳೂರು ತಂಡದ ಲೆಗ್ ಸ್ಕಿನ್ನರ್‌ಗಳಾದ ಆ್ಯಡಂ ಜಾಂಪ ಹಾಗು ಯಜುವೇಂದ್ರ ಚಾಹಲ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರೂ ಮತ್ತಾರು ಪ್ರಭಾವ ಬೀರಲಿಲ್ಲ. ಈ ಮೂಲಕ ಮತ್ತೊಮ್ಮೆ ಬೆಂಗಳೂರಿನ ಕಪ್ ಎತ್ತುವ ಕನಸು ಕೊನೆಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು