2:33 PM Thursday28 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ…

ಇತ್ತೀಚಿನ ಸುದ್ದಿ

ಆಗಸ್ಟ್ 15ರಂದು ಆರೋಗ್ಯ, ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ನಿಂದ ‘ಸ್ವಾತಂತ್ರ್ಯ ದಿನದ ಸಂಕಲ್ಪ’

August 13, 2020, 12:25 PM

ಮಂಗಳೂರು(reporterkarnataka news):

ಕೊರೋನಾ ಆತಂಕದ ಮರೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನವ ಉದಾರವಾದಿ ನೀತಿಗಳನ್ನು ರಭಸದಿಂದ ಜಾರಿಗೊಳಿಸುತ್ತಿದೆ. ಇದರಿಂದಾಗಿ ದೇಶದ ಸಂವಿಧಾನ ಖಾತರಿ ಪಡಿಸಿದ ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕು ಜನತೆಯಿಂದ ಕಸಿಯಲ್ಪಡುತ್ತಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ,ಆರೋಗ್ಯದ ವ್ಯಾಪಾರೀಕರಣವನ್ನು , ಉದ್ಯೋಗ ನಷ್ಟವನ್ನು ತಡೆಗಟ್ಟಿ ಯುವಜನರನ್ನು ನಿರೋದ್ಯೋಗದಿಂದ ರಕ್ಷಿಸಬೇಕು ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯೋತ್ಸವವನ್ನು “ಸ್ವಾತಂತ್ರ್ಯ ದಿನದ ಸಂಕಲ್ಪ” ವನ್ನಾಗಿ ಆಚರಿಸಲು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ನಿರ್ಧರಿಸಿದೆ.

ದೇಶ ಸ್ವತಂತ್ರಗೊಳ್ಳುವ ಸಂದರ್ಭ, ಶಿಕ್ಷಣ, ಉದ್ಯೋಗ, ಆರೋಗ್ಯವನ್ನು ಪ್ರತಿಯೊಬ್ಬ ಪ್ರಜೆಗೂ ಖಾತರಿ ಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಸೇವಾ ಕ್ಷೇತ್ರವನ್ನಾಗಿಸಿ ನಾಗರಿಕರ ಮೂಲಭೂತ ಹಕ್ಕಾಗಿ ಪರಿಗಣಿಸಲಾಗಿತ್ತು. ದೇಶದ ಮೂಲೆ ಮೂಲೆಗಳಲ್ಲೂ ಶಾಲೆ, ಆಸ್ಪತ್ರೆಗಳನ್ನು ಸರಕಾರ ಆದ್ಯತೆಯಿಂದ ತೆರೆಯತೊಡಗಿತ್ತು.‌ ಉದ್ಯೋಗ ಯುವಜನರ ಹಕ್ಕೆಂದು ಪರಿಗಣಿಸಲ್ಪಟ್ಟು  ಉದ್ಯೋಗ ದೊರಕುವವರಗೆ ನಿರುದ್ಯೋಗ ಭತ್ತೆ ನೀಡುವ ಬೇಡಿಕೆಗೂ ಬಲಬಂದಿತ್ತು.

ಆದರೆ ತೊಂಬತ್ತರ ದಶಕದಲ್ಲಿ‌ ಆರಂಭಗೊಂಡ ಉದಾರೀಕರಣ, ಖಾಸಗೀಕರಣದ ನೀತಿಗಳು ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನೂ ವ್ಯಾಪಾರೀಕರಣಕ್ಕೆ ತೆರೆದಿಟ್ಟವು. ಅದರ ಪರಿಣಾಮವಾಗಿ ಇಂದು “ದುಡ್ಡಿದ್ದವರಿಗಷ್ಟೆ ಆರೋಗ್ಯ, ಶಿಕ್ಷಣ” ಎಂಬ ನೀತಿ ಅನಧಿಕೃತವಾಗಿ ಜಾರಿಗೆ ಬಂದಿದೆ. ಇದರಿಂದ ಬಹುಸಂಖ್ಯಾತ ಜನ ವಿಭಾಗ ಗುಣಮಟ್ಟದ ಶಿಕ್ಷಣ, ಅರೋಗ್ಯ ಸೇವೆಯಿಂದ ವಂಚಿತಗೊಂಡಿವೆ. ಎಲ್ಲೆಡೆ ಖಾಸಗಿ ಶಾಲೆ, ಆಸ್ಪತ್ರೆಗಳು ತೆರೆದು ಸರಕಾರಿ ಶಾಲೆ, ಆಸ್ಪತ್ರೆಗಳು ಪಾಲು ಬಿದ್ದಿವೆ. ಭದ್ರತೆಯ ಉದ್ಯೋಗವಂತು ನವ ಉದಾರವಾದದ ಈ ಕಾಲಘಟ್ಟದಲ್ಲಿ ಯುವ ಜನರಿಗೆ ಕನಸಾಗಿಯಷ್ಟೆ ಉಳಿದಿದೆ. ಆ ಮೂಲಕ ಸ್ವಾತಂತ್ರ್ಯ ಹೋರಾಟದ ಆಶಯ, ಆಳುವ ಜನಗಳ ಭರವಸೆ ಹುಸಿಗೊಂಡಿದೆ. ಕೊರೋನಾ ಸಂದರ್ಭವಂತು ಈ ಎಲ್ಲಾ ರಂಗದ ಹುಳುಕುಗಳನ್ನು ಶಂಕೆಗೆ ಎಡೆಯಿಲ್ಲದಂತೆ ಬಹಿರಂಗ ಪಡಿಸಿದೆ.

ಈ ಹಿನ್ನಲೆಯಲ್ಲಿ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನವನ್ನು ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕನ್ನು ಉಳಿಸುವ, ಸ್ವತಂತ್ರ ಭಾರತ ನೀಡಿದ ವಾಗ್ದಾನವನ್ನು ನೆನಪಿಸುವ ನಿಟ್ಟಿನಲ್ಲಿ‌ “ಸ್ವಾತಂತ್ರ್ಯ ದಿನದ ಸಂಕಲ್ಪ” ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಿದೆ ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು