ಇತ್ತೀಚಿನ ಸುದ್ದಿ
ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ ನಿಲ್ಲಲಿ: ಡಿವೈಎಫ್ಐ ಪ್ರತಿಭಟನೆಯಲ್ಲಿ ಆಗ್ರಹ
August 19, 2020, 2:15 PM

ಮಂಗಳೂರು(reporterkarnataka news):
ಸರಕಾರಿ ಆಸ್ಪತ್ರೆ ಬಲಪಡಿಸಲು, ಖಾಸಗೀ ಆಸ್ಪತ್ರೆ ನಿಯಂತ್ರಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಕೊರೊನಾ ಹೆಸರಲ್ಲಿ ಖಾಸಗೀ ಆಸ್ಪತ್ರೆಗಳ ಲೂಟಿಕೋರ ನೀತಿಯನ್ನು ಖಂಡಿಸಿ ಡಿವೈಎಫ್ ಐ ಪಕಲಡ್ಕ ಘಟಕದಿಂದ ಬೃಹತ್ ಪ್ರತಿಭಟನೆ ಪಕಲಡ್ಕದಲ್ಲಿ ಬುಧವಾರ ನಡೆಯಿತು.

ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿರೋಧಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ದ.ಕ. ಜಿಲ್ಲಾದ್ಯಕ್ಷ
ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ , ಜಿಲ್ಲಾ ಮುಖಂಡರಾದ ಅಶ್ರಫ್ ಕೆಸಿರೋಡ್, ಮಾಜಿ ಕಾರ್ಪೋರೇಟರ್ ಜಯಂತಿ ಬಿ ಶೆಟ್ಟಿ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪೈರೋಜ್ ಪಕ್ಕಲಡ್ಕ, ದೀಪಕ್ ಬಜಾಲ್ , ಲೋಕೇಶ್ ಎಂ, ವರಪ್ರಸಾದ್, ಧೀರಜ್, ಜಗದೀಶ್ ಕುಲಾಲ್, ಯಶ್ ರಾಜ್ ಮುಂತಾದವರು ಉಪಸ್ಥಿತರಿದ್ದರು.