1:43 PM Saturday6 - March 2021
ಬ್ರೇಕಿಂಗ್ ನ್ಯೂಸ್
ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಡಾ. ಎಂ. ಮೋಹನ್ ಆಳ್ವರಿಗೆ ಕವಿ, ಸಜ್ಜನ ರಾಜಕಾರಣಿ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ  ಶ್ಲಾಘ್ಯದಲ್ಲಿ 10ನೇ ತರಗತಿ ಸಿಬಿಎಸ್ ಇ ಗಣಿತ, ವಿಜ್ಞಾನ ಟ್ಯೂಶನ್ ತರಗತಿಗೆ ಪ್ರವೇಶ… ಮಂಗಳೂರಿನಲ್ಲಿ ಹಸುಗೂಸುಗಳ ಬೃಹತ್ ಮಾರಾಟ ಜಾಲ ಪತ್ತೆ: ಗಂಡು ಮಗುವಿಗೆ 6 ಲಕ್ಷ,… ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಾಲಿಕೆಗೆ ದೂರು ರವಾನೆಗೆ ಬರೋಬ್ಬರಿ 8…

ಇತ್ತೀಚಿನ ಸುದ್ದಿ

ದುಗ್ಗಲಾಯ ದೇವಸ್ಥಾನ ವಠಾರದಲ್ಲಿ ಪರಿಸರ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ

September 30, 2020, 5:00 PM

ಸುಳ್ಯ(reporterkarnataka news): ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪರಿಸರ ಸಂರಕ್ಷಣೆ ಕಾರ್ಯಕ್ರಮ ಅಂಗವಾಗಿ ಧಾರ್ಮಿಕ ಕೇಂದ್ರ, ಶಿಕ್ಷಣ ಕೇಂದ್ರ,  ರಸ್ತೆ ಇಕ್ಕೆಲಗಳಲ್ಲಿ ಹಮ್ಮಿಕೊಂಡಿರುವ ಗಿಡ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ದುಗ್ಗಲಡ್ಕದ ಶ್ರೀ ದುಗ್ಗಲಾಯ ದೇವಸ್ಥಾನದ ವಠಾರದಲ್ಲಿ ಸಾಂಕೇತಿಕವಾಗಿ ಚಾಲನೆ‌ ನೀಡಲಾಯಿತು.

ದೈವಸ್ಥಾನದ ಸಮಿತಿ ಅಧ್ಯಕ್ಷ ದಯಾನಂದ ಸಾಲ್ಯಾನ್ ಹಾಗೂ ನಾಗನಕಟ್ಟೆ ಅಭಿವೃದ್ಧಿ ಸಮಿತಿ ಸದಸ್ಯರಾದ ಕುಶಾಲಪ್ಪ ಕಜೆ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಟಿ.ಎನ್. ಸತೀಶ್ ಕಲ್ಮಕಾರ್, ವೇದಿಕೆ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ನಿರ್ಧರಿಸಿದಂತೆ ಹಮ್ಮಿಕೊಂಡಿದ್ದು ಪ್ರಚಾರಕ್ಕೋಸ್ಕರವಲ್ಲ, ಬದಲಾಗಿ ಉತ್ತಮ ರೀತಿಯಲ್ಲಿ ನೆಟ್ಟು, ಜನತೆಗೆ  ಅದರ ಸದ್ಭಳಕೆಯಾಗುವಂತೆ ಹಮ್ಮಿಕೊಳ್ಳಲಾಗಿದೆ. ವೇದಿಕೆ ಜನಸಾಮಾನ್ಯರಿಗೆ  ಸರಕಾರದ ಸವಲತ್ತುಗಳ ಮಾಹಿತಿ, ಭ್ರಷ್ಟಾಚಾರ ವಿರುದ್ಧದ ಹೋರಾಟ, ಶೈಕ್ಷಣಿಕ ಕ್ಷೇತ್ರ, ರೈತರ ಸಂಕಷ್ಟಗಳ ಸಹಿತ ಜನಪರ ಹೋರಾಟಗಳಲ್ಲಿ ಧ್ವನಿಯಾಗುತಿದೆ. ಸಾರ್ವಜನಿಕರು ವೇದಿಕೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ವೇದಿಕೆಯ ಪರಿಸರ ಪ್ರಮುಖ್ ಅಭಿಷೇಕ್, ತಾಲುಕು ಸಮಿತಿ ಸದಸ್ಯ ಭರತ್ ಕನ್ನಡ್ಕ, ಗ್ರಾಮಸ್ಥರಾದ ಯತೀಶ್ ರೈ, ಗಂಗಾಧರ, ಮನು, ರೂಪೇಶ್, ಕಿಶೋರ್,  ಹರೀಶ್, ಶಿವ, ದಿನೇಶ್ ಮಣಿಯಾಣಿ ಉಪಸ್ಥಿತರಿದ್ದರು. ಟಿ.ಎನ್.ಸತೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು