ಇತ್ತೀಚಿನ ಸುದ್ದಿ
ದುಬಾರಿ ಫೆರಾರಿ ಕಾರು ಮಾಲಿಕನಿಗೆ ದಂಡ: ಕಾರಣ ಏನು ಗೊತ್ತೇ?
September 27, 2020, 8:29 AM

ಬೆಂಗಳೂರು(reporterkarnataka news): ರಾಜಧಾನಿ ಬೆಂಗಳೂರಿನಲ್ಲಿ ವಿಲಾಸಿ ಫೆರಾರಿ ಕಾರನ್ನು ನೋಂದಾವಣೆ ನಂಬರ್ ಇಲ್ಲದೆ ಚಲಾಯಿಸುತ್ತಿದ್ದ ಮಾಲಿಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಆರ್ ಆರ್ ಎಂ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ವಿಲ್ಸನ್ ಗಾರ್ಡ್ ನ್ ಸಂಚಾರಿ ಠಾಣೆ ಎ ಎಸ್ ಐ ದಂಡ ವಿಧಿಸಿದ್ದಾರೆ.
ರೆಫಾರಿ ಕಾರಿನ ಆರಂಭಿಕ ದರ 3.5 ಕೋಟಿ ರೂಪಾಯಿಗಳಾಗಿವೆ. ವಿಲಾಸಿ ಕಾರು ಖರೀದಿಸಿದ್ದರೂ ಅದರ ನೋಂದಾವಣೆ ಸಂಖ್ಯೆ ಕಾರಿನಲ್ಲಿ ಇರಲಿಲ್ಲ ಎಂದು ಆರೋಪಿಸಲಾಗಿದೆ.