ಇತ್ತೀಚಿನ ಸುದ್ದಿ
ಡ್ರಗ್ಸ್ ಜಾಲ: ಎನ್ ಸಿಬಿಯಿಂದ ನಟ ಅರ್ಜುನ್ ರಾಮ್ ಪಾಲ್ ತೀವ್ರ ವಿಚಾರಣೆ
November 13, 2020, 4:00 PM

ಮುಂಬೈ(reporterkarnataka news): ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಎನ್ ಸಿ ಬಿ ನಟ ಅರ್ಜುನ್ ರಾಂ ಪಾಲ್ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ಮನೆಯಲ್ಲಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮುಂಜಾನೆಯಿಂದಲೇ ಹಿರಿಯ ಅಧಿಕಾರಿಗಳು ಅರ್ಜುನ್ ರಾಂ ಪಾಲ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಅರ್ಜುನ್ ರಾಂಪಾಲ್ ಅವರ ಗೆಳೆಯ ಪಾಲ್ ಬಾರ್ಟೆಲ್ ನನ್ನು ಎನ್ ಸಿ ಬಿ ಬಂಧಿಸಿದೆ.