ಇತ್ತೀಚಿನ ಸುದ್ದಿ
ಡ್ರಗ್ಸ್ ಆರೋಪಿಗಳ ರಕ್ಷಣೆಗೆ ಬಿಜೆಪಿ ಯತ್ನ: ಕಾಂಗ್ರೆಸ್ ಆರೋಪ
September 7, 2020, 1:52 AM

ಬೆಂಗಳೂರು(reporterkarnataka news): ಮಾದಕ ದ್ರವ್ಯ ಜಾಲದ ಆರೋಪಿಗಳ ಪೈಕಿ ಕೆಲವರಿಗೆ ಬಿಜೆಪಿ ಜತೆ ಸಂಪರ್ಕವಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ರಕ್ಷಿಸಲು ತೆರೆಮರೆಯ ಯತ್ನ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಈ ಆರೋಪ ಮಾಡಿದೆ. ಹಿರಿಯ ಸಚಿವರೊಬ್ಬರು ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದೇ ವೇಳೆ ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ನೈಜೀರಿಯಾ ಮೂಲದ ವಿದೇಶಿ ಡ್ರಗ್ಸ್ ಫೆಡ್ಲರ್ ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹನುಮಂತ ನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.