ಇತ್ತೀಚಿನ ಸುದ್ದಿ
ಡ್ರಗ್ಸ್ ಜಾಲ: ಚಿತ್ರನಟಿ ರಾಗಿಣಿ A2 ಆರೋಪಿ, ಇನ್ನೂ ಆರಂಭವಾಗದ ವಿಚಾರಣೆ
September 5, 2020, 7:34 AM

ಬೆಂಗಳೂರು(reporterkarnataka news): ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಟಿ ರಾಗಿಣಿ ದಿವೇದಿ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಅವರು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 12 ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ರಾಗಿಣಿ A2 ಆರೋಪಿಯಾಗಿದ್ದಾರೆ. ಶಿವಪ್ರಕಾಶ್ ಚಿಪ್ಪಿ ಮೊದಲ ಆರೋಪಿ. ಆರೋಪಿಗಳ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳೂ ಕೂಡಾ ಇದ್ದಾರೆ.