ಇತ್ತೀಚಿನ ಸುದ್ದಿ
ಡ್ರಗ್ಸ್ ಜಾಲ ಬೇಧಿಸಲು ಮಂಗಳೂರಿನಲ್ಲಿ ರೌಡಿಗಳ ಪರೇಡ್ : 180 ಮಂದಿಗೆ ನೋಟಿಸ್ , ಹಾಜರಿ 90 ಮಾತ್ರ!
September 7, 2020, 7:45 AM

ಮಂಗಳೂರು(reporterkarnataka news): ಡ್ರಗ್ಸ್ ಜಾಲ ಸ್ಯಾಂಡಲ್ ವುಡ್ ನ್ನು ತಲ್ಲಣಗೊಳಿಸುತ್ತಿದ್ದಂತೆ ದೂರದ ಕರಾವಳಿಯಲ್ಲಿಯೂ ಹಬ್ಬಿಕೊಂಡಿರುವ ಮಾದಕ ವಸ್ತುಗಳ ಸಾಗಾಟದ ಬೇರು ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಸೋಮವಾರ ನಗರದ ಪೊಲೀಸ್ ಕವಾಯತ್ತು ಗ್ರೌಂಡ್ ನಲ್ಲಿ ರೌಡಿಗಳ ಪರೇಡ್ ನಡೆಸಲಾಗಿದೆ.
ಮಾದಕ ವಸ್ತುಗಳ ಸಾಗಾಟ ಹಾಗೂ ಬಳಕೆ ಕುರಿತು ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪರೇಡ್ ಆಯೋಜಿಸಲಾಗಿತ್ತು. ಒಟ್ಟು180 ಮಂದಿ ರೌಡಿಗಳಿಗೆ ಪರೇಡ್ ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಇದರಲ್ಲಿ 90 ಮಂದಿ ಹಾಜರಾಗಿದ್ದರು. ವಿಶೇಷವೆಂದರೆ ಇವರಲ್ಲಿ 6 ಮಂದಿ ವಿದ್ಯಾರ್ಥಿಗಳು ಸೇರಿದ್ದರು.
ಕಳೆದ ವರ್ಷ ಜಿಲ್ಲೆಯಲ್ಲಿ 4 ಮಂದಿ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ಪ್ರಸ್ತಾಪ ಕಳುಹಿಸಲಾಗಿತ್ತು. ಇವರಲ್ಲಿ ಒಬ್ಬರ ಮೇಲೆ ಗೂಂಡಾ ಕಾಯಿದೆ ಜಾರಿಗೊಳಿಸಲಾಗಿದೆ.