ಇತ್ತೀಚಿನ ಸುದ್ದಿ
ನಟಿ ರಾಗಿಣಿ ಚಾಮರಾಜಪೇಟೆ ಸಿಸಿಬಿ ಕಚೇರಿಗೆ: ಲ್ಯಾಪ್ ಟಾಪ್, ಮೊಬೈಲ್ ವಶ
September 4, 2020, 7:43 AM

ಬೆಂಗಳೂರು(reporterkarnataka news): ನಟಿ ರಾಗಿಣಿ ಅವರ ಮೊಬೈಲ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ. ನಟಿ ರಾಗಿಣಿಯನ್ನು ಇದೀಗ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆದೊಯ್ಯಲಾಗುತ್ತಿದೆ.
ಅಲ್ಲಿ ಪ್ರಾಥಮಿಕ ವಿಚಾರಣೆ ನಡೆಯಲಿದೆ. ರಾಗಿಣಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿದ್ದರೆ ಸಿಸಿಬಿ ಪೊಲೀಸರು ಮುಂದಿನ ಕಾನೂನು ಕ್ರಮ ಅನುಸರಿಸಲಿದ್ದಾರೆ.
ಪೊಲೀಸರು ವಿಚಾರಣೆಗಾಗಿ ರಾಗಿಣಿಯನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಇದುವರೆಗೆ ಅಧಿಕೃತವಾಗಿ ಬಂಧಿಸಿಲ್ಲ.