ಇತ್ತೀಚಿನ ಸುದ್ದಿ
ದಿಲ್ಲಿಯಿಂದ ಸುದ್ದಿ ಬಂದಿದೆ ಪ್ರತಿಪಕ್ಷ ನಾಯಕ ಸ್ಥಾನ ಬದಲಾಗುತ್ತದೆ ಎಂದು ನಂಗೂ ಹೇಳಬಹುದು: ಯಡಿಯೂರಪ್ಪ
November 4, 2020, 9:02 PM

ಮಂಗಳೂರು(reporterkarnataka news): ದೆಹಲಿಯಿಂದ ಸುದ್ದಿ ಬಂದಿದೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳುತ್ತಾರೆ. ಹಾಗೆ ನಾನು ಕೂಡ ದೆಹಲಿಯಿಂದ ಸುದ್ಧಿ ಬಂದಿದೆ. ಸಿದ್ಧರಾಮಯ್ಯ ಅವರ ಪ್ರತಿಪಕ್ಷದ ನಾಯಕ ಸ್ಥಾನ ಬದಲಾಗುತ್ತದೆ ಎಂದು ಹೇಳಬಹುದು. ಆದರೆ ನಾನು ಆ ತರಹ ಹಗುರವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಸಿದ್ಧರಾಮಯ್ಯ ಅವರು ಜವಾಬ್ದಾರಿಯಿಂದ ಮಾತನಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬುಧವಾರ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆರ್.ಆರ್. ನಗರ, ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಸೋಲು ಅನುಭವಿಸುತ್ತದೆ ಎಂದು ಭವಿಷ್ಯ ನುಡಿದರು.


ಮುಂದಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಬಿಜೆಪಿ ನೂರಕ್ಕೆ ನೂರು ಗೆಲುವು ಸಾಧಿಸುತ್ತದೆ. ಎರಡೂ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋತ ಮೇಲೆ ಯಾರು ರಾಜೀನಾಮೆ ನೀಡಬೇಕೆಂದು ತಿಳಿಯುತ್ತದೆ ಎಂದು ಹೇಳಿದ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕೆ ನಾನು ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.