ಇತ್ತೀಚಿನ ಸುದ್ದಿ
ಸಿಸಿಬಿ ವಿಚಾರಣೆಗೆ ಹಾಜರಾದ ನಟ ದಿಗಂತ್: ಮುಂದೇನು?
September 23, 2020, 12:56 PM

ಬೆಂಗಳೂರು(reporterkarnataka news): ನಟ ದಿಗಂತ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ 20 ನಿಮಿಷ ತಡವಾಗಿ ಅವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಮುಖ್ಯ ಕಚೇರಿಯಲ್ಲಿ ಹಾಜರಾದರು.
ಪುನೀತ್ ಮತ್ತು ಅಂಜುಮಾಲಾ ನಾಯಕ್ ನೇತೃತ್ವದ ಅಧಿಕಾರಿಗಳ ತಂಡ ದಿಗಂತ್ ಅವರನ್ನು ವಿಚಾರಣೆಗೆ ಗುರಿಪಡಿಸಲಿದೆ.
ಸೆಪ್ಟೆಂಬರ್ 16ರಂದು ಸಿಸಿಬಿ ದಿಗಂತ್ ಅವರನ್ನು ವಿಚಾರಣೆಗೆ ಗುರಿಪಡಿಸಿತ್ತು. ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ದಿಗಂತ್ ಬಳಿ ಇದ್ದ ಮೊಬೈಲನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಮೊಬೈಲ್ ನಲ್ಲಿದ್ದ ಡೇಟಾವನ್ನು ಸಿಸಿಬಿ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ.