ಇತ್ತೀಚಿನ ಸುದ್ದಿ
ಖ್ಯಾತ ಕ್ರಿಕೆಟಿಗ ಧೋನಿಗೆ ಬಿಗ್ ರಿಲೀಫ್: ಕೊರೊನಾ ವರದಿ ನೆಗೆಟಿವ್
August 14, 2020, 6:00 AM

ನವದೆಹಲಿ(reporterkarnataka news): ಐಪಿಎಲ್ ಕ್ರೀಡಾಕೂಟಕ್ಕೆ ಸಿದ್ದತೆ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಿಗ್ ರಿಲೀಫ್ ದೊರೆತಿದೆ. ಅವರ ಕೊರೋನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ರಾಂಚಿಯ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ನಡೆಸಿದ್ದಾರೆ. ಇದರಿಂದಾಗಿ ಚೆನ್ನೈನಲ್ಲಿ ನಡೆಯಲಿರುವ ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಧೋನಿಗೆ ಸಾಧ್ಯವಾಗಲಿದೆ.
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಮುನ್ನ ಪ್ರತಿಯೊಬ್ಬ ಆಟಗಾರ ಎರಡು ಬಾರಿ ಕೊರೋನಾ ಪರೀಕ್ಷೆ ನಡೆಸಬೇಕು ಎಂದು ಬಿಸಿಸಿಐ ಸೂಚಿಸಿದೆ. ಇದರಂತೆ ಧೋನಿ ಪರೀಕ್ಷೆ ನಡೆಸಿದ್ದಾರೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಕ್ರೀಡಾಕೂಟ ಆರಂಭವಾಗಲಿದೆ