4:15 AM Monday25 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ಲಕ್ಷದೀಪೋತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಮೇಳೈಸಿದ 88ನೇ ಸರ್ವಧರ್ಮ ಸಮ್ಮೇಳನ

December 13, 2020, 10:58 PM

ಧರ್ಮಸ್ಥಳ(reporterkarnataka news): ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಅಂಗವಾಗಿ ಭಾನುವಾರ 88ನೇ ಸರ್ವಧರ್ಮ ಸಮ್ಮೇಳನ ಮೇಳೈಸಿತು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ, ಸಚಿವ ವಿ. ಸೋಮಣ್ಣ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಡಿ.14 ಸೋಮವಾರ ಸಾಹಿತ್ಯ ಸಮ್ಮೇಳನಗಳು ನಡೆಯಲಿದೆ. 

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಸಾಂಪ್ರದಾಯಿಕ ಮಹತ್ವವಿದೆ. ಈ ಸಂದರ್ಭದಲ್ಲಿ ದೇವಳದ ಪ್ರತಿ ಪಾರ್ಶ್ವದಿಂದ ಇಡೀ ದೇವಾಲಯವನ್ನು ಶುದ್ಧೀಕರಿಸಿ, ಬಣ್ಣ ಬಳಿದು ಸುಸ್ಥಿತಿಗೆ ತರುವ ಕೆಲಸ ಕಳೆದ 150 ವರ್ಷಗಳಿಂದ ನಡೆದು ಬರುತ್ತಿದೆ. ದೇಗುಲದ ಮಹಾದ್ವಾರದಿಂದ ಆರಂಭಗೊಂಡು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಲಕ್ಷ ದೀಪೋತ್ಸವದ ಕೊನೆಯ ದಿನ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ ನಡೆಯುತ್ತದೆ. ಇದೊಂದು ಅಪರೂಪದ ಆರಾಧನಾ ವಿಧಾನವಾಗಿದೆ. ಇದು ಧರ್ಮಸ್ಥಳದಲ್ಲಿ ಮಾತ್ರ ನಡೆಯುತ್ತದೆ. ದೀಪವೊಂದು ನೂರಾಗಿ, ಸಾವಿರವಾಗಿ, ಲಕ್ಷವಾಗಿ ಪಸರಿಸಿ ಅಜ್ಞಾನದ ಅಂಧಕಾರವನ್ನು ನಾಶ ಮಾಡಲಿ, ನಾಡಿನ ಜನತೆಗೆ ಸಮೃದ್ಧಿ ಮತ್ತು ಸಂತೃಪ್ತಿ ಉಂಟು ಮಾಡಲಿ ಎಂದು ಧರ್ಮಾಧಿಕಾರಿಗಳು ಡಾ. ಡಿ. ವೀರೇಂದ್ರ ಹೆಗ್ಗಡೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ನೆರವೇರಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು