ಇತ್ತೀಚಿನ ಸುದ್ದಿ
ಧರ್ಮಗುರು, ನಿವೃತ್ತ ಪ್ರಿನ್ಸಿಪಾಲ್ ವಂದನೀಯ ಎಡ್ವಿನ್ ಸಿರಿಲ್ ಮಸ್ಕರೇನ್ಹಸ್ ನಿಧನ
September 20, 2020, 7:14 PM

ಮಂಗಳೂರು(reporterkarnataka news):
ಪೆರ್ಮನ್ನೂರು ಸಂತ ಸೆಬಾಸ್ಟಿನ್ ಕಾಲೇಜ್, ನಾರಾವಿ ಸಂತ ಅಂತೋನಿ ಕಾಲೇಜ್ ಹಾಗೂ ಬೀದರ್ ಸಂತ ಜೋಸೆಫ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ವಂದನೀಯ ಸ್ವಾಮಿ ಎಡ್ವಿನ್ ಸಿರಿಲ್ ಮಸ್ಕರೇನ್ಹಸ್ ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ಮುಂಜಾನೆ ನಿಧನರಾದರು.
1991ರಲ್ಲಿ ಧರ್ಮ ಗುರುಗಳಾಗಿ ದೀಕ್ಷೆ ಪಡೆದ ಎಡ್ವಿನ್ ಅವರು ಶಿರ್ವ, ಮೇರೆಮಜಲು ಹಾಗೂ ಬೆಂದೂರು ಚರ್ಚ್ ಗಳಲ್ಲಿ ಸಹಾಯಕ ಗುರುಗಳಾಗಿ, ಪೇತ್ರಿ, ಆನೆಗುಡ್ಡೆ ಹಾಗೂ ತಲಪಾಡಿಯ ಮರಿಯಾಶ್ರಮದಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದರು.
2003ರಿಂದ ಶಿಕ್ಷಣ ಸೇವೆ ಸಲ್ಲಿಸಿದ್ದ ಅವರು ಅಪಾರ ವಿದ್ಯಾರ್ಥಿ ಸಮುದಾಯವನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆ ಅವರ ಹುಟ್ಟೂರಾದ ಕೆಂಳ್ಬೆಟ್- ಬೋಳಾದ ಸಂತ ಡಾನ್ ಬೋಸ್ಕೋದಲ್ಲಿ ನಡೆಯಿತು.