ಇತ್ತೀಚಿನ ಸುದ್ದಿ
ದೇಶದೆಲ್ಲೆಡೆ ಕೊರೊನಾ ಲಸಿಕೆ ಪೂರೈಕೆಗೆ ಚಾಲನೆ: ಮೊದಲಿಗೆ 13 ಹಬ್ ಗಳಿಗೆ ಪೂರೈಕೆ
January 12, 2021, 8:05 AM

ನವದೆಹಲಿ(reporterkarnataka news): ಕೊರೊನಾ ಲಸಿಕೆ ವಿತರಣೆ ಅಂಗವಾಗಿ ಪುಣೆಯ ಸೆರಾಂ ಸಂಸ್ಥೆಯಿಂದ ಬಿಗಿ ಭದ್ರತೆಯ ಮಧ್ಯೆ ಕೊವಿಶೀಲ್ಡ್ ಲಸಿಕೆ ಯನ್ನು ದೇಶದ ವಿವಿಧ ಪ್ರದೇಶಗಳಿಗೆ ಪೂರೈಸುವ ಕಾರ್ಯ ಆರಂಭವಾಗಿದೆ.
ದೇಶದಲ್ಲಿ ಗುರುತಿಸಲಾಗಿರುವ 13 ಹಬ್ ಗಳಿಗೆ ಮೊದಲಿಗೆ ಲಸಿಕೆ ಪೂರೈಸಲಾಗುತ್ತಿದೆ. ಅಲ್ಲಿಂದ ಇತರ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ.
ಬಿಗಿ ಭದ್ರತೆಯ ಮಧ್ಯೆ ಲಸಿಕೆ ವಿತರಣೆ ನಡೆಯುತ್ತಿದೆ. ರಾಜ್ಯದಲ್ಲಿ ಮೊದಲು ಬೆಂಗಳೂರು ಮತ್ತು ಬೆಳಗಾವಿಗೆ ಲಸಿಕೆ ಬರಲಿದೆ.