ಇತ್ತೀಚಿನ ಸುದ್ದಿ
ದೇಶದಲ್ಲಿ ಒಂದೇ ದಿನ ಕೊರೊನಾಕ್ಕೆ 1092 ಬಲಿ
August 19, 2020, 6:08 AM

ನವದೆಹಲಿ(reporterkarnataka news):
ಮಾರಕ ಕೊರೊನಾದ ಮಹಾ ಸ್ಫೋಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ 1092 ಮಂದಿಯ ಪ್ರಾಣ ಅಪಹರಿಸಿದೆ. ಇದರೊಂದಿಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 52 889ಕ್ಕೆ ತಲುಪಿದೆ.
ಒಂದೇ ದಿನದಲ್ಲಿ ಹೊಸದಾಗಿ 64,531 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 27, 67, 274ಕ್ಕೆ ತಲುಪಿದೆ.
ದೇಶದ ಆಸ್ಪತ್ರೆಗಳಲ್ಲಿ 6,76, 514 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ