ಇತ್ತೀಚಿನ ಸುದ್ದಿ
ದೇಶದಲ್ಲಿ ಒಂದೇ ದಿನ ಕೊರೊನಾಕ್ಕೆ 1043 ಬಲಿ: 68,584 ಮಂದಿ ಗುಣಮುಖ
September 3, 2020, 4:35 AM

ನವದೆಹಲಿ(reporterkarnataka news): ದೇಶದಲ್ಲಿ ಮಾರಕ ಕೊರೊನಾದ ಉಪಟಳ ತೀವ್ರಗೊಂಡಿದೆ. ಕೊರೊನಾ ಹೊಸದಾಗಿ 1043 ಮಂದಿಯ ಬಲಿಪಡೆದುಕೊಂಡಿದೆ.
ಕೊರೊನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಇದೀಗ 67, 376ಕ್ಕೆ ತಲುಪಿದೆ.
ಒಂದೇ ದಿನದಲ್ಲಿ ದಾಖಲೆ ಮಂದಿಗೆ ಕೊರೊನಾ ಸೋಂಕು ತಗುಲಿದೆ. 24 ಗಂಟೆ ಅವಧಿಯಲ್ಲಿ 83, 883 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 38, 53, 406ಕ್ಕೆ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ 68, 584 ಮಂದಿ ಗುಣಮುಖರಾಗಿದ್ದಾರೆ.