6:03 PM Wednesday2 - December 2020
ಬ್ರೇಕಿಂಗ್ ನ್ಯೂಸ್
ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್ ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ರಾಜ್ಯದ 6004 ಗ್ರಾಮ ಪಂಚಾಯಿತಿ ಪೈಕಿ 5762 ಗ್ರಾಪಂಗಳಲ್ಲಿ ನಡೆಯಲಿದೆ ಲೋಕಲ್ ಫೈಟ್  ರಾಜಕೀಯ ಪಕ್ಷ ಸ್ಥಾಪನೆ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಸಭೆ ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್

ಇತ್ತೀಚಿನ ಸುದ್ದಿ

ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದಾಗ ಕೊಡಗು ಅಕ್ಷರಶಃ ಸ್ಮಶಾನ ಮೌನದಿಂದ ಕೂಡಿತ್ತು!

August 16, 2020, 9:06 AM

ಅನುಷ್ ಪಂಡಿತ್ ಮಂಗಳೂರು

ಮಡಿಕೇರಿ (reporterkarnataka news):

ಕೊರೊನಾದ ಮಧ್ಯೆಯೂ ಇಡೀ ದೇಶ ಶನಿವಾರ ಸ್ವಾತಂತ್ರ್ಯ ಸಂಭ್ರಮದಲ್ಲಿ ತೇಲಾಡುತ್ತಿದ್ದರೆ, ನೆರೆಯ ಕೊಡಗು ಜಿಲ್ಲೆ ಮೌನದಲ್ಲಿ ಮುಳುಗಿತ್ತು. ದುಃಖ, ದುಗುಡ ಪ್ರತಿಯೊಬ್ಬರಲ್ಲಿ ಮನೆ ಮಾಡಿತ್ತು.

ಕೊರೊನಾ ಕಾಟದ ನಡುವೆಯೂ ಕೊಡಗಿನಾದ್ಯಂತ ಸುರಿದ ವಿಪರೀತ ಮಳೆಯ ಪರಿಣಾಮ ಅಲ್ಲಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ ನೆಲೆಸಿದೆ. ನೂರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಜನರ ಬದುಕು ತೀರಾ ಸಂಕಷ್ಟದಲ್ಲಿದೆ. ಸಾವು -ನೋವು, ಅಪಾರವಾಗಿದೆ. ಅಲ್ಲಲ್ಲಿ  ದಾರಿ ಮಧ್ಯೆ ಬೃಹತ್ ಗಾತ್ರದ ಕಲ್ಲು, ಬಂಡೆ, ಮಣ್ಣು ದಾರಿಗೆ ಅಡ್ಡಲಾಗಿ ಬೀಳುತ್ತಿದೆ. ಜನರು ಭಯದಿಂದ ಬದುಕುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಕೃತಿಯ ಮುನಿಸು ಕಳೆದ ವರ್ಷದಂತೆ ಈ ವರ್ಷವೂ ಮುಂದುವರಿದಿದೆ.

ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು ಎರಡು ಮನೆಗಳು ಸಮಾಧಿಯಾಗಿವೆ. ತಲಕಾವೇರಿ ದೇಗುಲದ ಅರ್ಚಕ ನಾರಾಯಣಾಚಾರ್ ಸೇರಿದಂತೆ ಐವರು ಜೀವಂತ ಸಮಾಧಿಯಾಗಿದ್ದಾರೆ. ದುರಂತ ನಡೆದು 10 ದಿನಗಳು ಕಳೆದರೂ ಇನ್ನೆರಡು ಮೃತದೇಹ ಪತ್ತೆಯಾಗಿಲ್ಲ.

ಸ್ವಾತಂತ್ರ್ಯ  ದಿನವಾದ ಶನಿವಾರ ಕೂಡ ವಿಪರೀತ ಮಳೆಯಿಂದ ದಾರಿಗೆ ಅಡ್ಡಲಾಗಿ ಮರಗಳು ಬಿದ್ದಿವೆ. ನೆರೆ, ಪ್ರವಾಹ ಪ್ರದೇಶ ಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ವಿಪತ್ತು ನಿರ್ವಹಣೆ ತಂಡದ ಸಹಾಯದಿಂದ ನೆರೆ ಸಂತ್ರಸ್ತರನ್ನು ರಕ್ಷಿಸಿದ್ದಾರೆ. 

ಕೊಡಗು ಜಿಲ್ಲಾಧಿಕಾರಿ ಕಳೆದ  ಒಂದು ವಾರದಿಂದ ಬೆಟ್ಟ ಗುಡ್ಡಗಳಿಗೆ ಸ್ವತಃ ತಾವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾರಿಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಲು ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೆರೆಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ನಿರಾಶ್ರಿತ ಕೇಂದ್ರಗಳಿಗೆ ವರ್ಗಾಯಿಸಿದ್ದಾರೆ.  ಸ್ವಾತಂತ್ಯ ದಿನವಾದ್ರೂ ನಿರಂತರವಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ನೆರವಿಗೆ ನಿಂತಿದ್ದಾರೆ. 

ಇತ್ತೀಚಿನ ಸುದ್ದಿ

ಜಾಹೀರಾತು