11:04 AM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ದೇರೆಬೈಲ್ ದಕ್ಷಿಣ ವಾರ್ಡ್ : ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿ ಪೂಜೆ

November 20, 2020, 4:36 PM

ಮಂಗಳೂರು(reporterkarnataka news): ಮಹಾನಗರ ಪಾಲಿಕೆಯ ದೇರೆಬೈಲ್ ದಕ್ಷಿಣ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಶಿಲಾನ್ಯಾಸ ನೇರವೇರಿಸಿದರು.

ಆ ವೇಳೆ ಮಾತನಾಡಿದ ಶಾಸಕರು, ದೇರೆಬೈಲ್ ದಕ್ಷಿಣ ವಾರ್ಡಿನ ಕೊಟ್ಟಾರ 1 ನೇ ಕ್ರಾಸ್ ಬಳಿ ಒಳ ಚರಂಡಿ ವ್ಯವಸ್ಥೆಗೆ 4.72 ಲಕ್ಷ, ಕೋಟೆಕಣಿ 1ನೇ ಅಡ್ಡರಸ್ತೆಯಲ್ಲಿ ಕವಲೊಡೆದ ಅಡ್ಡರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿಗೆ 5 ಲಕ್ಷ, ದಡ್ಡಲಕಾಡಿನಲ್ಲಿ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ 6 ಲಕ್ಷ, ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆಯ ಬಳಿ ಒಳಚರಂಡಿ ಕಾಮಗಾರಿಗೆ 4.70 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಎಲ್ಲಾ ಕಾಮಗಾರಿಗಳ ಗುದ್ದಲಿಪೂಜೆ ಸ್ಥಳೀಯರ ಸಮ್ಮುಖದಲ್ಲಿ ನೆರವೇರಿಸಿದ್ದೇವೆ. ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೂ ಸೂಚನೆ ನೀಡಿದ್ದೇನೆ. ಕಾಮಗಾರಿ ನಡೆಯುವ ಸಂದರ್ಭ ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶಶಿಧರ್ ಹೆಗ್ಡೆ, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಚರಿತ್ ಪೂಜಾರಿ, ವಿನಯ್ ನೇತ್ರಾ, ಮುರಳಿ, ಸುನಂದಾ, ಪ್ರಸನ್ನ ದಡ್ಡಲ್ ಕಾಡ್, ಉಮನಾಥ್ ಅಮೀನ್, ವಸಂತ್ ಜೆ. ಪೂಜಾರಿ, ಮಹೇಶ್, ರಾಮ್ ದಾಸ್, ರಾಕೇಶ್ ಕೊಟ್ಟಾರ ಕ್ರಾಸ್, ಶಿವರಾಮ್, ಶ್ರೀನಿವಾಸ್ ಪೈ, ಮಹಿಳಾ ಮೋರ್ಚಾದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು