ಇತ್ತೀಚಿನ ಸುದ್ದಿ
ದೆಹಲಿಯಲ್ಲಿ ಶಂಕಿತ ಉಗ್ರನ ಬಂಧನ: ಎಲ್ಲೆಡೆ ಕಟ್ಟೆಚ್ಚರ, ಸ್ಫೋಟಕ ಸಹಿತ ಮದ್ದುಗುಂಡು ವಶ
August 22, 2020, 6:08 AM

ನವದೆಹಲಿ(reporterkarnataka news): ರಾಜಧಾನಿ ನವದೆಹಲಿಯಲ್ಲಿ ಸಂಭಾವ್ಯ ಭಾರಿ ದುರಂತವನ್ನು ತಪ್ಪಿಸಲಾಗಿದೆ. ಶಂಕಿತ ಐಎಸ್ ಐಎಸ್ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಉಗ್ರನನ್ನು ಉತ್ತರ ಪ್ರದೇಶ ಮೂಲದ ಅಬು ಯೂಸಫ್ ಖಾನ್ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿಯ ಬಳಿಕ ಉಗ್ರನನ್ನು ಸೆರೆಹಿಡಿಯಲಾಗಿದೆ.
ಬಂಧಿತ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ತಂಡ ವಿಚಾರಣೆಗೆ ಗುರಿಪಡಿಸಿದೆ. ಉಗ್ರನ ಬಳಿ ಇದ್ದ ಸುಧಾರಿತ ಸ್ಫೋಟಕ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೆಹಲಿಯಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಆರೋಪಿ ಸಂಚು ಹೂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.