8:14 PM Friday4 - December 2020
ಬ್ರೇಕಿಂಗ್ ನ್ಯೂಸ್
ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ

ಇತ್ತೀಚಿನ ಸುದ್ದಿ

ದೆಹಲಿ ಟು ಲಂಡನ್’: ಜಗತ್ತಿನಲ್ಲೇ ಅತೀ ದೂರದ ರಸ್ತೆ ಪ್ರವಾಸ, 17 ದೇಶಗಳ ದಾಟಿ ಪ್ರಯಾಣ! !

August 28, 2020, 3:49 AM

ನವದೆಹಲಿ(reporterkarnataka news);

ಕೊರೊನಾ ವೈರಸ್‌ ಇಡೀ ಜಗತ್ತಿನ ಪ್ರವಾಸೋದ್ಯವನ್ನು ಬುಡಮೇಲು ಮಾಡಿದರೆ, ಖಾಸಗಿ ಸಂಸ್ಥೆಯೊಂದು ಹೊಸ ಸಾಹಸಕ್ಕೆ ಕೈ ಹಾಕಿದೆ. ಇದು ಅಂತಿಂಥ ಸಾಹಸವಲ್ಲ, ಬಲು ದೊಡ್ಡ ಸಾಹಸ. ಮುಂದಿನ ವರ್ಷ ಜಗತ್ತಿನ ಅತೀ ದೂರದ ರಸ್ತೆ ಪ್ರವಾಸಕ್ಕೆ ಅದು ಸಿದ್ಧತೆ ನಡೆಸಿದೆ. ದೆಹಲಿಯಿಂದ ಬ್ರಿಟನ್ನಿನ ಲಂಡನ್ ಗೆ ಬಸ್ ಪ್ರವಾಸವನ್ನು ಆಯೋಜಿಸಿದೆ.

ದೆಹಲಿಯ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯಾದ ಅಡ್ವೆಂಚರ್‌ ಓವರ್‌ಲ್ಯಾಂಡ್‌ ಸಂಸ್ಥೆಯು ದೆಹಲಿಯಿಂದ ಲಂಡನ್ನಿಗೆ 2021ರ ಮೇ ತಿಂಗಳಲ್ಲಿ ಈ ಐತಿಹಾಸಿಕ ಪ್ರವಾಸ ಆಯೋಜಿಸಿದೆ. ಒಬ್ಬ ವ್ಯಕ್ತಿಗೆ 15 ಲಕ್ಷ ರೂ. ಶುಲ್ಕ ನಿಗದಿಪಡಿಸಿದ್ದು, ಅದರಲ್ಲಿ ಊಟ, ತಿಂಡಿ, ಹೋಟೆಲ್‌ ವಾಸ್ತವ್ಯ, ವೀಸಾ ಶುಲ್ಕ ಇತ್ಯಾದಿಗಳೆಲ್ಲ ಸೇರಿವೆ. ಮಧ್ಯದಲ್ಲಿ ಎಲ್ಲಾದರೂ ಇಳಿದು ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನಿಸಿದರೆ ಪ್ರವಾಸಿಗರು ತಾವೇ ಹಣ ಪಾವತಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

ಅಡ್ವೆಂಚರ್‌ ಓವರ್‌ಲ್ಯಾಂಡ್‌ ಸಂಸ್ಥೆಯು ದೆಹಲಿಯಿಂದ ಲಂಡನ್ನಿಗೆ 2021ರ ಮೇ ತಿಂಗಳಲ್ಲಿ ಈ ಐತಿಹಾಸಿಕ ಪ್ರವಾಸ ಆಯೋಜಿಸಿದೆ. ಒಬ್ಬ ವ್ಯಕ್ತಿಗೆ 15 ಲಕ್ಷ ರೂ. ಶುಲ್ಕ ನಿಗದಿಪಡಿಸಿದ್ದು, ಅದರಲ್ಲಿ ಊಟ, ತಿಂಡಿ, ಹೋಟೆಲ್‌ ವಾಸ್ತವ್ಯ, ವೀಸಾ ಶುಲ್ಕ ಇತ್ಯಾದಿಗಳೆಲ್ಲ ಸೇರಿವೆ. ಮಧ್ಯದಲ್ಲಿ ಎಲ್ಲಾದರೂ ಇಳಿದು ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನಿಸಿದರೆ ಪ್ರವಾಸಿಗರು ತಾವೇ ಹಣ ಪಾವತಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

‘ದೆಹಲಿ ಟು ಲಂಡನ್‌’ ಬಸ್‌ ಒಟ್ಟು 17 ದೇಶಗಳನ್ನು ಹಾದು ಲಂಡನ್ನಿಗೆ ತಲುಪಲಿದೆ. ಬಸ್‌ ಸಂಚರಿಸಲಿರುವ ಒಟ್ಟು ದೂರ 20 ಸಾವಿರ ಕಿ.ಮೀ. ಆಗಿದ್ದು, ಪ್ರವಾಸಕ್ಕೆ ಒಟ್ಟು 70 ದಿನಗಳು ಬೇಕು. ಭಾರತದಿಂದ ಮ್ಯಾನ್ಮಾರ್‌, ಥಾಯ್ಲೆಂಡ್‌, ಲಾವೋಸ್‌, ಚೀನಾ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ, ಕಜಖಸ್ತಾನ, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್‌, ಚೆಕ್‌ ಗಣರಾಜ್ಯ, ಜರ್ಮನಿ, ಬೆಲ್ಜಿಯಂ ಮಾರ್ಗವಾಗಿ ಬಸ್‌ ಬ್ರಿಟನ್ನಿಗೆ ಪ್ರವೇಶಿಸಲಿದೆ. ದಾರಿಯಲ್ಲಿ ಸಿಗುವ ಎಲ್ಲ ಪ್ರಮುಖ ಪ್ರವಾಸಿ ತಾಣದಲ್ಲೂ 2 ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ತುಷಾರ್‌ ಅಗರ್ವಾಲ್‌ ತಿಳಿಸಿದ್ದಾರೆ.

ಜೀವಮಾನದಲ್ಲೇ ಅತ್ಯಂತ ಹೆಚ್ಚು ಥ್ರಿಲ್ಲಿಂಗ್ ಕೊಡುವ ಈ ಪ್ರವಾಸದಲ್ಲಿ ಟೂರಿಸ್ಟ್ ಗಳು ತಮಗಿಷ್ಟವಾದ ದೇಶದಲ್ಲಿ ಇಳಿದುಕೊಂಡು ಹೆಚ್ಚು ದಿನ ಅಲ್ಲೇ ಕಾಲ ಕಳೆಯುವ ಸೌಲಭ್ಯವೂ ಇರಲಿದೆ. ಇದಕ್ಕಾಗಿ ‘ಹಾಪ್‌ ಆನ್‌ ಹಾಪ್‌ ಆಫ್‌’ ಸೌಲಭ್ಯ ನೀಡಲಾಗಿದೆ.  ಮುಂದೆ  ಆ ಪ್ರವಾಸಿಗರು ತಮ್ಮದೇ ಖರ್ಚಿನಲ್ಲಿ ವಿಮಾನದಲ್ಲಿ ಬಂದು  ಬಸ್‌ ಹತ್ತಬೇಕಾಗುತ್ತದೆ ಅಥವಾ ಊರಿಗೆ ಮರಳಬೇಕಾಗುತ್ತದೆ ಎಂದು ತುಷಾರ್‌ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು